ಸ್ಮೃತಿ ಇರಾನಿ ಅವಧಿ ಇದೇ ತಿಂಗಳಿಗೆ ಕೊನೆಯಾಗಲಿದ್ದು, ಮರು ಆಯ್ಕೆ ಬಯಸಿದ್ದಾರೆ. ಗುಜರಾತ್'ನಲ್ಲಿ ಶಾಸಕರ ಬಲ ಹೆಚ್ಚಾಗಿರುವುದರಿಂದ ಇವರಿಬ್ಬರು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ.
ನವದೆಹಲಿ(ಜು.26): ಮೂರು ರಾಜ್ಯಗಳ ರಾಜ್ಯಸಭಾ ಚುನಾವಣೆ ಆಗಸ್ಟ್ 8ರಿಂದ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಗುಜರಾತ್'ನಿಂದ ಸ್ಪರ್ಧಿಸಿದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅದೇ ರಾಜ್ಯದಿಂದ ಕಣಕ್ಕಿಳಿಯಲಿದ್ದಾರೆ.
ಅಮಿತ್ ಶಾ ಗುಜರಾತ್'ನಿಂದ ಶಾಸಕರಾಗಿದ್ದು, ಪಕ್ಷದ ನಿರ್ಧಾರದಂತೆ ಇದೇ ಮೊದಲ ಬಾರಿಗೆ ರಾಜ್ಯಸಭೆಯಿಂದ ಸ್ಪರ್ಧಿಸಲಿದ್ದಾರೆ. ಸ್ಮೃತಿ ಇರಾನಿ ಅವಧಿ ಇದೇ ತಿಂಗಳಿಗೆ ಕೊನೆಯಾಗಲಿದ್ದು, ಮರು ಆಯ್ಕೆ ಬಯಸಿದ್ದಾರೆ. ಗುಜರಾತ್'ನಲ್ಲಿ ಶಾಸಕರ ಬಲ ಹೆಚ್ಚಾಗಿರುವುದರಿಂದ ಇವರಿಬ್ಬರು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ.
ಇನ್ನುಳಿದಂತೆ ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಚುನಾವಣೆ ನಡೆಯಲಿದೆ.
