ಯಡಿಯೂರಪ್ಪ ಬಿಡುಗಡೆ ಮಾಡಿರುವ ಜಾಜ್‌ರ್‍ಶೀಟ್‌ ನೋಡಿದರೆ ನಗು ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಬಿಜೆಪಿಯವರು ಸಿದ್ಧಪಡಿಸಿರುವ ‘ಚಾಜ್ರ್ಶೀಟ್' ನೋಡಿದರೆ ನ್ಯಾಯಾ ಲಯವು ಅದನ್ನು ವಜಾ ಮಾಡಿ ಚಾಜ್ರ್ ಶೀಟ್ ಹಾಕಿದವರಿಗೇ ಶಿಕ್ಷೆ ನೀಡುತ್ತದೆ.
ಯಡಿಯೂರಪ್ಪ ಬಿಡುಗಡೆ ಮಾಡಿರುವ ಜಾಜ್ರ್ಶೀಟ್ ನೋಡಿದರೆ ನಗು ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷ ಅಲ್ಲ ‘ಭ್ರಷ್ಟಾಚಾರ ಜನತಾ ಪಕ್ಷ' ಎಂಬಂತಾಗಿದೆ. ಅವರ ಮನೆ ಜಗಳ ಬೀದಿ ಜಗಳವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆಯೇ ಗೊಂದಲವಿದೆ. ಉಪ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಸೋತಿದ್ದಾರೆ. ಹೀಗಾಗಿ ಹತಾಶರಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
