ಗುಜರಾತ್‌ ಸಂಸದರ ದಾಖಲೆ ಗೆಲುವಿನ ಅಂತರ ಲಕ್ಷ ಲಕ್ಷ| ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾದ ಲೋಕಸಭಾ ಚುನಾವಣೆ

ಅಹಮದಾಬಾದ್‌[ಮೇ.25]: ಪ್ರಸಕ್ತ ಲೋಕಸಭಾ ಚುನಾವಣೆ ಹಲವು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿದೆ. ಗುಜರಾತ್‌ ರಾಜ್ಯದಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಗೆಲುವು ಕಂಡ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳ ಸೋತ ಅಭ್ಯರ್ಥಿಯ ನಡುವಿನ ಅಂತರ 1ಲಕ್ಷ ಮತವನ್ನು ದಾಟಿದೆ. ಅತಿ ಕಡಿಮೆ ಎಂದರೆ 1.27 ಲಕ್ಷದಿಂದ ಗರಿಷ್ಟ6.89 ಲಕ್ಷಗಳಷ್ಟು ಲೀಡ್‌ ಪಡೆದಿರುವುದು ಹೊಸ ದಾಖಲೆ ಎನಿಸಿದೆ.

ಇದು ಒಂದೆರಡಲ್ಲ ಗುಜರಾತ್‌ನಲ್ಲಿ ಲೋಕಸಭಾ ಕಣಕ್ಕಿಳಿದ ಎಲ್ಲಾ 26 ಅಭ್ಯರ್ಥಿಗಳದ್ದೂ ಇದೇ ಸಾಧನೆ. ನೌಸಾರಿ ಕ್ಷೇತ್ರದ ಸಿ.ಆರ್‌. ಪಾಟ್ಝೀ್ಛ್ಛಗೆಲುವಿನ ಅಂತರ ಬರೋಬ್ಬರಿ 6,89,668 ಲಕ್ಷ. ಇನ್ನು ಅತಿ ಕಡಿಮೆ ಅಂತರದ ಗೆಲುವು ದಾಖಲಿಸಿದ ದಾಹೋದ್‌ ಕ್ಷೇತ್ರದ ಜಸ್ವಂತಿನ್‌ ಭಬೋರ್‌ ಗೆಲುವಿನ ಅಂತರ 1,27,596ಲಕ್ಷ ಮತಗಳು.