ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಬಹುತೇಕ ಫೈನಲ್ : ಯಾರಿಗೆ ಲಭ್ಯ, ತಪ್ಪಿಸಿಕೊಂಡ ನಾಯಕರ್ಯಾರು ?

First Published 8, Apr 2018, 12:09 PM IST
BJP Candidate list shot list released
Highlights

ಇಂದು ಸಂಜೆ ಬಹುತೇಕ ಎಲ್ಲ ನಾಯಕರ ಹೆಸರು ಘೋಷಣೆ ಮಾಡಲಾಗುತ್ತದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದ್ದು ಇಂದು ರಾತ್ರಿ 70 ರಿಂದ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ. ಈ ಬಗ್ಗೆ ಸುವರ್ಣ ನ್ಯೂಸ್​ಗೆ ಬಿಜೆಪಿ ಉನ್ನತ ಮೂಲಗಳ ಖಚಿತ ಮಾಹಿತಿ ಲಭ್ಯವಾಗಿದೆ. ಟಿಕೆಟ್ ಹಂಚಿಕೆ ಕುರಿತು ಬೆಳಗಿನ ಜಾವ 3 ಗಂಟೆವರೆಗೆ ಅಮಿತ್​ ಶಾ ಬಿಜೆಪಿ ನಾಯಕರಾದ ಯಡಿಯೂರಪ್ಪ ಅನಂತ್ ಕುಮಾರ್, ಸಂತೋಷ್ ಚರ್ಚೆ ನಡೆಸಿದರು. ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣದಿಂದ, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ವಿಜಯಪುರ ಬಸನಗೌಡ ಪಾಟೀಲ್ ಯತ್ನಾಳ್​, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿಗೆ, ತುಮಕೂರಿನಲ್ಲಿ ಜ್ಯೋತಿ ಗಣೇಶ್​ಗೆ ಟಿಕೆಟ್ ಪಕ್ಕಾ ಆಗಿದೆ.

ಜೆಡಿಎಸ್ ತೊರೆದ ಮಲ್ಲಿಕಾರ್ಜುನ ಖೂಬಾಗೂ ಟಿಕೆಟ್​ ಬಸವ ಕಲ್ಯಾಣದಿಂದ ಮಲ್ಲಿಕಾರ್ಜುನ ಖೂಬಾಗೂ ಟಿಕೆಟ್​ ಫೈನಲ್​ ಇಂದು ಸಂಜೆ ಬಹುತೇಕ ಎಲ್ಲ ನಾಯಕರ ಹೆಸರು ಘೋಷಣೆ ಮಾಡಲಾಗುತ್ತದೆ. ಶಿಗ್ಗಾವಿಯಲ್ಲಿ ಸೋಮಣ್ಣ ಬೇವಿನಮರದ್​, ​ ತುಮಕೂರಿನಲ್ಲಿ ಸೊಗಡು ಶಿವಣ್ಣಗೂ ಟಿಕೆಟ್​ ತಪ್ಪಿದೆ.  ಇವರಿಬ್ಬರನ್ನು ಮನವೊಲಿಸಲು ಯಡಿಯೂರಪ್ಪ ಅವರಿಗೆ ಸೂಚಿಸಲಾಗಿದೆ.

ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್..?

ಶೋಭಾ ಕರಂದ್ಲಾಜೆ ಪರ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದು ಯಶವಂತಪುರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್​​ಗೆ ಮನವಿ ಮಾಡಿದ್ದು ಆದರೆ ಅಂತಿಮವಾಗಿಲ್ಲ.

loader