ಪರಿಕ್ಕರ್ ಆರೋಗ್ಯದ ಬಗ್ಗೆ ಬಿಜೆಪಿ ನಿರ್ಲಕ್ಷ್ಯ

BJP being irresponsible with Manohar Parrikar’s health: Congress
Highlights

ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ಅನಾರೋಗ್ಯ ಎದುರಾಗಿದ್ದು ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಗೋವಾ ಕಾಂಗ್ರೆಸ್  ಹಾಗೂ ಬಿಜೆಪಿ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.

ಪಣಜಿ :ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ಅನಾರೋಗ್ಯ ಎದುರಾಗಿದ್ದು ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಗೋವಾ ಕಾಂಗ್ರೆಸ್  ಹಾಗೂ ಬಿಜೆಪಿ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.

ಬಿಜೆಪಿಯು ಪರಿಕ್ಕರ್ ಅವರ ಅನಾರೋಗ್ಯದ ಸಂಬಂಧ ಹೆಚ್ಚು ನಿರ್ಲಕ್ಷ್ಯ ವಹಿಸಿದೆ.  ಇದರಿಂದ ಅವರಿಗೆ ಅತ್ಯಂತ ನೋವುಂಟಾಗಿದೆ ಎಂದು ಗೋವಾ ಕಾಂಗ್ರೆಸ್ ಮುಖಂಡ  ಗಿರೀಶ್ ಚೋಡಾಂಕರ್ ಹೇಳಿದ್ದಾರೆ. 

ತೀವ್ರ ಅನಾರೋಗ್ಯದ ಸಂದರ್ಭದಲ್ಲಿಯೂ ಕೂಡ ಕೆಲಸ ಮಾಡುವಂತೆ ಅವರಿಗೆ ಬಿಜೆಪಿಯಿಂದ ಹೆಚ್ಚು ಒತ್ತಡ ಹೇರಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಬಳಿಕ 3 ತಿಂಗಳ ಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಇದೀಗ ಮರಳಿದ್ದಾರೆ. 

loader