Asianet Suvarna News Asianet Suvarna News

ಬಿಜೆಪಿಗೆ ಮತ್ತೆ ಸಂಕಷ್ಟ : ಒಂದು ತಿಂಗಳು ಟೈಂ ನೀಡಿದ ಮಿತ್ರ ಪಕ್ಷ

ಬಿಜೆಪಿಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಮೈತ್ರಿ ಪಕ್ಷದಿಂದಲೇ ಬಿಜೆಪಿಗೆ ಖಡಕ್ ವಾರ್ನಿಂಗ್ ದೊರಕಿದೆ. ಒಂದು ತಿಂಗಳ ಸಮಯಾವಕಾಶವನ್ನು ನೀಡಿದೆ

BJP Ally MGP Gives One Month Ultimatum To Parrikar
Author
Bengaluru, First Published Oct 25, 2018, 1:57 PM IST
  • Facebook
  • Twitter
  • Whatsapp

ಪಣಜಿ :  ಗೋವಾ ಆಡಳಿತ ಪಕ್ಷವಾಗಿರುವ ಬಿಜೆಪಿಯ ಮಿತ್ರಿ ಪಕ್ಷವಾಗಿರುವ ಮಹಾರಾಷ್ಟ್ರವಾಡಿ ಗೋಮಂಟಕ್ ಪಕ್ಷವು ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ತಮ್ಮ ಸ್ಥಾನವನ್ನು ತೊರೆಯಬೇಕು ಎಂದು ಆಗ್ರಹಿಸಿದೆ. 

ಎಂಜಿಪಿ ಅಧ್ಯಕ್ಷ ದೀಪಕ್ ದವಲಿಕರ್ ಅವರು ಮಾತನಾಡಿ ರಾಜ್ಯದ ಸದ್ಯದ ಸ್ಥಿತಿಗತಿಯ ಬಗ್ಗೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ೪.  ಅನೇಕ ತಿಂಗಳುಗಳಿಂದ ಮುಖ್ಯಮಂತ್ರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಆದರೆ ಅವರ ಸ್ಥಾನಕ್ಕೆ ಯಾರನ್ನೂ ಕೂಡ ನೇಮಿಸದೇ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. 

ಪರ್ರಿಕರ್ ಅವರು ಸುಧಾರಿಸಿಕೊಳ್ಳುವವರೆಗೂ ಕೂಡ ಹಿರಿಯ ಸಚಿವರಿಗೆ ತನ್ನ ಜವಾಬ್ದಾರಿಯನ್ನು ಹಸ್ತಾಂತರ ಮಾಡಬೇಕು ಎಂದು ಹೇಳಿದ್ದಾರೆ. 

ಅಲ್ಲದೇ ಜನರು ಪ್ರತಿದಿನ ನಮ್ಮ ಮನೆ ಬಾಗಿಲಿಗೆ ಬಂದು ಸರ್ಕಾರದ ಬಗ್ಗೆ ದೂರು ನೀಡುತ್ತಿದ್ದಾರೆ ಎಂದು ಬೆಂಬಲಿತ ಮುಖಂಡರು ದೂರಿದ್ದಾರೆ.  ಇನ್ನೊಂದು ತಿಂಗಳಲ್ಲಿ ಆಡಳಿತ ಹಸ್ತಾಂತರವಾಗದಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದುಹೇಳಿದ್ದಾರೆ. 

Follow Us:
Download App:
  • android
  • ios