ಕದಿರೇಶ್ ಹತ್ಯೆಯಲ್ಲಿ ‘ಕೈ’ ಕೈವಾಡ: ಬಿಜೆಪಿ ಆರೋಪ

BJP Alleges Congress Leaders Hand in Kadiresh Murder
Highlights

  • ರಾಜಕೀಯ ಕಾರಣದಿಂದ ಕದಿರೇಶ್ ಹತ್ಯೆ ಮಾಡಲಾಗಿದೆ
  • ಕಾಂಗ್ರೆಸ್​ ಪಕ್ಷದ ಬೆಂಬಲದಿಂದ ಕದಿರೇಶ್ ಹತ್ಯೆಯಾಗಿದೆ

ಬೆಂಗಳೂರು:  ಬಿಬಿಎಂಪಿ ಬಿಜೆಪಿ ಕಾರ್ಪೋರೇಟರ್ ಪತಿ ಕದಿರೇಶ್ ಬರ್ಬರ ಹತ್ಯೆ ನಡೆದಿದ್ದು, ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ರಾಜಕೀಯ ಕಾರಣದಿಂದ ಕದಿರೇಶ್ ಹತ್ಯೆ ಮಾಡಲಾಗಿದೆ, ಕಾಂಗ್ರೆಸ್​ ಪಕ್ಷದ ಬೆಂಬಲದಿಂದ ಕದಿರೇಶ್ ಹತ್ಯೆಯಾಗಿದೆ. ‘ಚಾಮರಾಜಪೇಟೆ ಕ್ಷೇತ್ರದ ‘ಕೈ’ ಟಿಕೆಟ್ ಆಕಾಂಕ್ಷಿಯಿಂದಲೇ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

ವಾರ್ಡ್ ನಂಬರ್ 138 ಛಲವಾದಿ ಪಾಳ್ಯರ ಕಾರ್ಪೋರೇಟರ್​ ರೇಖಾ ಪತಿ ಕದಿರೇಶನ್’ನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಸಂಜೆ 4 ಗಂಟೆ ವೇಳೆಗೆ ಕಾಟನ್​ಪೇಟೆಯ ಅಂಜಿನಪ್ಪ ಗಾರ್ಡನ್​​ನಲ್ಲಿ ಕದಿರೇಶ್​ ಹತ್ಯೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಸಹಚರರಿಂದ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಮೃತ ಕದಿರೇಶ್ ಕಾಟನ್​ಪೇಟೆಯಲ್ಲಿ 2002ರಲ್ಲೇ ರೌಡಿ ಶೀಟರ್ ಖಾತೆ ತೆರೆದಿದ್ದ. ಕದಿರೇಶ್​​ ವಿರುದ್ಧ ಹಲವಾರು ಶ್ರೀರಾಂಪುರ, ಕಾಟನ್​ಪೇಟೆ’ಗಳಲ್ಲಿ ಕೇಸ್’ಗಳು ದಾಖಲಾಗಿತ್ತು. ಒಟ್ಟು 15 ಪ್ರಕರಣಗಳಲ್ಲಿ ಕದಿರೇಶ್ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.

ಕದಿರೇಶ್ ವಿರುದ್ಧದ 5 ಪ್ರಕರಣಗಳು ಖುಲಾಸೆಯಾಗಿದ್ದು, ಇನ್ನೂ 10 ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಕದಿರೇಶ್​​ ವಿರುದ್ಧ ಕೊಲೆ, ಕೊಲೆಯತ್ನ. ಹಲ್ಲೆ ಬೆದರಿಕೆ ದೂರುಗಳಿತ್ತು.

loader