ಬಾಗಲಕೋಟೆಗೆ ರಾಹುಲ್ ಗಾಂಧಿ ಭೇಟಿ; ಗೋಮೂತ್ರ ಸಿಂಪಡಿಸಿ ರಸ್ತೆ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು

First Published 26, Feb 2018, 11:59 AM IST
BJP Activists Road Clean due to Rahul Gandhi Bagalkote Visit
Highlights

ರಾಹುಲ್ ಗಾಂಧಿ ಬಾಗಲಕೋಟೆಗೆ ಭೇಟಿ ಹಿನ್ನೆಲೆಯಲ್ಲಿ  ರಸ್ತೆಗೆ ಗೋಮೂತ್ರ ಸಿಂಪಡಿಸಿ  ಬಿಜೆಪಿ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ. 

ಬಾಗಲಕೋಟೆ (ಫೆ. 26):  ರಾಹುಲ್ ಗಾಂಧಿ ಬಾಗಲಕೋಟೆಗೆ ಭೇಟಿ ಹಿನ್ನೆಲೆಯಲ್ಲಿ  ರಸ್ತೆಗೆ ಗೋಮೂತ್ರ ಸಿಂಪಡಿಸಿ  ಬಿಜೆಪಿ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ. 

ಮುಚಖಂಡಿ ಕ್ರಾಸ್’ನಲ್ಲಿ ಗೋ ಮೂತ್ರ ಹಾಕಿ ಶುದ್ಧೀಕರಣ ಮಾಡಿದ್ದಾರೆ.  ರಾಹುಲ್ ಗಾಂಧಿ ಬಾಗಲಕೋಟೆಗೆ ಬಂದು ಅಪವಿತ್ರ ಮಾಡಿದ್ದಾರೆ ಅಂತ ರಸ್ತೆಯನ್ನು ಶುಚಿಗೊಳಿಸಿದ ಬಿಜೆಪಿ ಯವ ಕಾರ್ಯಕರ್ತರು ಗೋವಿಗೆ ವಿಶೇಷ ಪೂಜೆ ಮಾಡಿ, ಸೇಬು ಹಣ್ಣು ತಿನ್ನಿಸಿದ್ದಾರೆ. 

ಅಧಿಕಾರಿಗಳನ್ನ ದುರುಪಯೋಗಪಡಿಸಿಕೊಂಡು ಯುವಕರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.  ನಿನ್ನೆ ರಾಹುಲ್ ಭೇಟಿ ವೇಳೆ   ಬಿಜೆಪಿ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. 

loader