ಬಜೆಟ್’ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗಿಲ್ಲ ಮನ್ನಣೆ; ಇಂದಿನಿಂದ ಶುರು ಕಾರ್ಯಕರ್ತೆಯರ ಪ್ರತಿಭಟನೆ

First Published 17, Feb 2018, 9:12 AM IST
Bisiyuta Karyakartas Begins Protest from Today
Highlights

ಸರ್ಕಾರದ ಭರವಸೆ ಕೊಟ್ಟಿದ್ದಕ್ಕಾಗಿ ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದ  ಬಿಸಿಯೂಟ ಕಾರ್ಯಕರ್ತರು ಇಂದಿನಿಂದ ಮತ್ತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ’ಬಿಸಿ’ ಮುಟ್ಟಿಸಲಿದ್ದಾರೆ. 

ಬೆಂಗಳೂರು (ಫೆ. 17): ಸರ್ಕಾರದ ಭರವಸೆ ಕೊಟ್ಟಿದ್ದಕ್ಕಾಗಿ ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದ  ಬಿಸಿಯೂಟ ಕಾರ್ಯಕರ್ತರು ಇಂದಿನಿಂದ ಮತ್ತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ’ಬಿಸಿ’ ಮುಟ್ಟಿಸಲಿದ್ದಾರೆ. 

ಸಿಎಂ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ಬಜೆಟ್’​ನಲ್ಲಿ ತಮ್ಮ ವಿಚಾರ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ಇಂದು ಮತ್ತೆ ರಾಜ್ಯಾದ್ಯಂತ ಬಿಸಿ ಊಟ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಬಜೆಟ್​​ನಲ್ಲಿ ​ವಿಷಯ ಪ್ರಸ್ತಾಪವಾಗದೇ ತಮ್ಮ ಬೇಡಿಕೆ ಈಡೇರಿಲ್ಲ ಎಂಬ ಕಾರಣದಿಂದ ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆಗೆ ಇಳಿಯಲಿದ್ದಾರೆ. 

ಈ ಹಿಂದೆ ಬಿಸಿ ಊಟ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದಾಗ ಸಚಿವ ತನ್ವೀರ್ ಸೇಠ್ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ರು. ಆದ್ರೆ ಈಗ ಕೊಟ್ಟ ಮಾತನ್ನು ಸಿಎಂ ಹಾಗೂ ಸಚಿವರು ಮರೆತಿದ್ದಾರೆ. ಹೀಗಾಗಿ ಇಂದಿನಿಂದ ಮತ್ತೆ ಹೋರಾಟ ಪ್ರಾರಂಭ ಮಾಡುತ್ತೇವೆ ಅಂತ ಬಿಸಿಯೂಟ ಕಾರ್ಯಕರ್ತೆಯರು ಪಣ ತೊಟ್ಟಿದ್ದಾರೆ ಎಂದು  ಸುವರ್ಣನ್ಯೂಸ್‌ಗೆ  AITUC ರಾಜ್ಯಾದ್ಯಕ್ಷ H.K.ರಾಮಚಂದ್ರಪ್ಪ ಹೇಳಿದ್ದಾರೆ. 
 

loader