ಜಿಂಕೆ ಮರಿಗೆ ಎದೆ ಹಾಲುಣಿಸುವ ಫೋಟೋ ಜಾಲತಾಣದಲ್ಲಿ ವೈರಲ್‌| ಮಗುವಿಗೆ ಹಾಲುಣಿಸುವಂತೆ ಜಿಂಕೆ ಮರಿಗೆ ಹಾಲುಣಿಸುತ್ತಿರುವ ಪರಿಗೆ ಮೆಚ್ಚುಗೆಯ ಮಹಾಪೂರ

ಜೋಧ್‌ಪುರ[ಜು.20]: ಬಿಷ್ಣೋಯ್‌ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಜಿಂಕೆ ಮರಿಯೊಂದಕ್ಕೆ ಎದೆ ಹಾಲುಣಿಸುತ್ತಿರುವ ಫೋಟೋವೊಂದು ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಮಗುವಿಗೆ ಹಾಲುಣಿಸುವಂತೆ ಜಿಂಕೆ ಮರಿಗೆ ಹಾಲುಣಿಸುತ್ತಿರುವ ಪರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಐಎಫ್‌ಸ್‌ ಅಧಿಕಾರಿ ಪ್ರವೀಣ್‌ ಕಸ್ವಾನ್‌ ಎಂಬವರು ಟ್ವೀಟರ್‌ನಲ್ಲಿ ಈ ಮಹಾತಾಯಿಯ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ.

Scroll to load tweet…

‘ಬಿಶ್ನೋಯ್‌ ಸಮುದಾಯ ಪ್ರಾಣಿಗಳ ಆರೈಕೆಯನ್ನು ಹೇಗೆ ಮಾಡುತ್ತದೆನ್ನುವುದಕ್ಕೆ ಇದು ಉದಾಹರಣೆ. ಮಕ್ಕಳಿಗೆ ಸಿಗುವ ಆರೈಕೆ, ಪ್ರೀತಿಯನ್ನೇ ಈ ಮುಗ್ಧ ಪ್ರಾಣಿಗಳೂ ಪಡೆದುಕೊಳ್ಳುತ್ತವೆ’ ಎಂದು ಈ ಪೋಸ್ಟ್‌ ಜೊತೆ ಟಿಪ್ಪಣಿ ಬರೆದಿದ್ದಾರೆ.

ಕೇಜ್ರಿ ಮರ ಸಂರಕ್ಷಣೆಗಾಗಿ 363 ಮಂದಿ ಪ್ರಾಣತೆತ್ತಿರುವ ವಿಚಾರವನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

ಈ ಫೋಟೋ ವೀಕ್ಷಿಸಿದ ನೋಡುಗರೆಲ್ಲರೂ ಭಾವುಕರಾಗಿದ್ದು, ತಾಯಿಯ ಮಮತೆಗೆ ತಲೆ ಬಾಗಿದ್ದಾರೆ.