ಜೂನ್ 18ರಂದು ಬೆಂಗಳೂರಿನಲ್ಲಿ ಮತ್ತೊಂದು ಚುನಾವಣೆ

First Published 16, Jun 2018, 3:11 PM IST
Binnypet BBMP ward by election on June 18
Highlights
  • ಜೆಡಿಎಸ್'ನ ವಾರ್ಡ್ ಸದಸ್ಯೆ ನಿಧನದಿಂದ ತೆರವಾಗಿದ್ದ ಸ್ಥಾನ
  • ಜೂನ್ 18ರಂದು ಮತದಾನ, 19 ರಂದು ಮತಎಣಿಕೆ

ಬೆಂಗಳೂರು[ಜೂ.16]: ಬಿಬಿಎಂಪಿ ವಾರ್ಡ್‌ 121ರ ಬಿನ್ನಿಪೇಟೆಯಲ್ಲಿ ಜೂನ್‌ 18ರಂದು ಚುನಾವಣೆ ನಡೆಯಲಿದೆ. 

ವಾರ್ಡ್‌ನ ಸದಸ್ಯೆ ಜೆಡಿಎಸ್'ನ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಣದಲ್ಲಿ ಜೆಡಿಎಸ್'ನಿಂದ ಮಹದೇವಮ್ಮ ಅವರ ಪುತ್ರಿ ಐಶ್ವರ್ಯಾ ಬಿ.ಎನ್‌. , ಬಿಜೆಪಿಯಿಂದ ಚಾಮುಂಡೇಶ್ವರಿ ಜಿ. ಹಾಗೂ ಕಾಂಗ್ರೆಸಿನಿಂದ ವಿದ್ಯಾ ಶಶಿಕುಮಾರ್‌ ಸ್ಪರ್ಧಿಸಲಿದ್ದಾರೆ. ಮೂವರು ಪ್ರಬಲ ಅಭ್ಯರ್ಥಿಗಳಾಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

30 ಸಾಮಾನ್ಯ ಹಾಗೂ 7 ಸೂಕ್ಷ್ಮ ಒಳಗೊಂಡು ವಾರ್ಡಿನಲ್ಲಿ 37 ಮತಗಟ್ಟೆಗಳಿವೆ. 34572 ಮತದಾರರಲ್ಲಿ 17,746 ಪುರುಷರು, 16,826 ಮಹಿಳೆಯರಿದ್ದಾರೆ.    
ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.  ಜೂನ್ 19ರಂದು ನಗರದ ಹೋಂ ಸೈನ್ಸ್ ಕಾಲೇಜಿನಲ್ಲಿ  ಮತ ಎಣಿಕೆ ನಡೆಯಲಿದೆ. ಮತದಾನದ ದಿನದಂದು ಕಾರ್ಮಿಕರಿಗೆ ಮತದಾನಕ್ಕೆ ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಚುನಾವಣಾಧಿಕಾರಿ ಆದೇಶಿಸಿದ್ದಾರೆ.

loader