ನವದೆಹಲಿ[ಆ.10]: 20 ವರ್ಷಗಳ ಅವಧಿಯಲ್ಲೇ ದೀರ್ಘ ಸಮಯ ಕಲಾಪ ನಡೆಸಿ, 30ಕ್ಕೂ ಹೆಚ್ಚು ಮಸೂದೆಗಳಿಗೆ ಅನುಮೋದನೆ ಪಡೆದಿದ್ದ ಮೋದಿ ಸರ್ಕಾರ ಹೆಗ್ಗಳಿಕೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಮುಂದಿನ ಅಧಿವೇಶನದಲ್ಲಿ ಯಾವೆಲ್ಲಾ ಮಸೂದೆಗಳನ್ನು ಮಂಡಿಸಬೇಕು ಎಂಬ ನಿಟ್ಟಿನಲ್ಲಿ ಈಗಲೇ ಕಾರ್ಯ ಆರಂಭಿಸಿದೆ. ಅಲ್ಲದೇ ಮುಂದಿನ ಅಧಿವೇಶನದಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತಾಂತರ ವಿರೋಧಿ/ ಮತಾಂತರ ತಡೆ ಮಸೂದೆ ಮಂಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮತಾಂತರ ವಿರೋಧಿ ಮಸೂದೆ ಮಂಡನೆಗೆ ಮೋದಿ ಸರ್ಕಾರ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಆರಂಭಿಸಿದೆ. ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆಗಳೂ ಆರಂಭವಾಗಿದೆ. ಒತ್ತಾಯಪೂರ್ವಕವಾಗಿ ಹಾಗೂ ಆಮಿಷವೊಡ್ಡಿ ಧರ್ಮ ಮತಾಂತರ ಮಾಡುವುದನ್ನು ತಡೆಯುಬವ ನಿಟ್ಟಿನಲ್ಲಿ ಸರ್ಕಾರ ಈ ಮಸೂದೆ ಮಂಡಿಸಲು ಸಜ್ಜಾಗಿದೆ. 

ಮತಾಂತರ ವಿರೋಧಿ ಮಸೂದೆಗೆ ಮೋದಿ ಸರ್ಕಾರ ಸಜ್ಜು!

ಜಮ್ಮು ಕಾಶ್ಮೀರ ಪುನರ್ ರಚನಾ ಮಸೂದೆ, ತ್ರಿವಳಿ ತಲಾಖ್, ಮೋಟಾರು ವಾಹನ ಕಾಯ್ದೆ, RTI ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 40 ಮಸೂದೆಗಳನ್ನು ಮಂಡಿಸಲಾಗಿತ್ತು. ಇವುಗಳಲ್ಲಿ ಬರೋಬ್ಬರಿ 30 ಮಸೂದೆಗಳಿಗೆ ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ.