ಕಂಬಳ ಮತ್ತು ಎತ್ತಿನ ಗಾಡಿ ಸ್ಪರ್ಧೆಗೆ ಇದ್ದಂತಹ ಅಡ್ಡಿ ಈಗ ನಿವಾರಣೆಯಾಗಿದೆ. ಕರ್ನಾಟಕ ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, ಕಂಬಳಕ್ಕೆ ಅನುಕೂಲ ಮಾಡಿಕೊಡುವಂತೆ ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಿದೆ. ಈ ಮೂಲಕ ಕಂಬಳಕ್ಕೆ ಕಾನೂನಿನ ಮಾನ್ಯತೆ ದೊರಕಿದೆ.
ಬೆಂಗಳೂರು(ಫೆ.10): ಕಂಬಳ ಮತ್ತು ಎತ್ತಿನ ಗಾಡಿ ಸ್ಪರ್ಧೆಗೆ ಇದ್ದಂತಹ ಅಡ್ಡಿ ಈಗ ನಿವಾರಣೆಯಾಗಿದೆ. ಕರ್ನಾಟಕ ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, ಕಂಬಳಕ್ಕೆ ಅನುಕೂಲ ಮಾಡಿಕೊಡುವಂತೆ ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಿದೆ. ಈ ಮೂಲಕ ಕಂಬಳಕ್ಕೆ ಕಾನೂನಿನ ಮಾನ್ಯತೆ ದೊರಕಿದೆ.
ವಿಧಾನಸಭೆಯಲ್ಲಿ ಕರ್ನಾಟಕ ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಕಂಬಳ, ಎತ್ತಿನ ಗಾಡಿ ಸ್ಪರ್ಧೆಯ ಜೊತೆಗೆ ಕೊಬ್ಬರಿ ಹೋರಿ ಓಟದ ಸ್ಪರ್ಧೆಗೂ ಈ ವಿಧಾಯಕದಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ ಎತ್ತು, ಹೋರಿಗಳಿಗೆ ಹಿಂಸೆ ಮಾಡದಂತೆ ವಿಧೇಯಕದಲ್ಲಿ ಶರತ್ತು ವಿಧಿಸಲಾಗಿದೆ. ಈ ಮೂಲಕ ಕಂಬಳಕ್ಕಿದ್ದ ಬಹುದೊಡ್ಡ ವಿಘ್ನ ನಿವಾರಣೆಯಾದಂತಾಗಿದೆ.
ಕಂಬಳ ಕಾಪಾಡಿ ಎಂಬ ಅಭಿಯಾನವನ್ನು ಸುವರ್ಣ ನ್ಯೂಸ್ ಮಾಡಿತ್ತು, ಇದಕ್ಕೆ ರಾಜ್ಯದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿತ್ತು.
