ನಾನು ಆಧಾರ್ ಅಭಿಮಾನಿ ಎಂದ ಬಿಲ್ ಗೇಟ್ಸ್

Bill Gates says he is a fan of Aadhaar
Highlights

ಆಧಾರ್’ ಯೋಜನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಅವರು, ‘ಆಧಾರ್‌ನಿಂದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ವಾಷಿಂಗ್ಟನ್: ‘ಆಧಾರ್’ ಯೋಜನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಅವರು, ‘ಆಧಾರ್‌ನಿಂದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಗೇಟ್ಸ್ ಅವರ ಬಿಲ್-ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು, ವಿಶ್ವದ ಇತರ ದೇಶಗಳಿಗೂ ಆಧಾರ್ ಮಾದರಿಯ ಕಾರ್ಯಕ್ರಮಮ ವಿಸ್ತರಣೆ ಆಗಲು ವಿಶ್ವಬ್ಯಾಂಕ್‌ಗೆ ನೆರವು ನೀಡಲಿದೆ. ಬುಧವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಗೇಟ್ಸ್, ಆಧಾರ್ ವಿಶ್ವದ ಇತರ ದೇಶಗಳಿಗೆ ವಿಸ್ತರಣೆ ಆಗುವಂತಾಗಲು ವಿಶ್ವಬ್ಯಾಂಕ್‌ಗೆ ಆಧಾರ್ ‘ಜನಕ’ ಎಂದೇ ಹೆಸರಾದ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಆಧಾರ್ ವಿಶ್ವದ ಇತರ ದೇಶಗಳಲ್ಲೂ ಜಾರಿಗೊಳಿಸಲು ಯೋಗ್ಯವಾದ  ಯೋಜನೆಯಾಗಿದೆ. ಆಧಾರ್‌ನ ಲಾಭಗಳು ಅಧಿಕವಾಗಿವೆ. ದೇಶಗಳು ಬೆಳೆಯಲು, ಆರ್ಥಿಕ ವೃದ್ಧಿ ಆಗಲು ಹಾಗೂ   ಉತ್ತಮ ಗುಣಮಟ್ಟದ ಆಡಳಿತಕ್ಕೆ ಇದು ಅವಶ್ಯಕ’ ಎಂದು ಬಿಲ್ ಗೇಟ್ಸ್ ಒತ್ತಿ ಹೇಳಿದರು.

ಇತರ ದೇಶಗಳಿಗೆ ಆಧಾರ್ ವಿಸ್ತರಣೆ ಆಗುವಂತಾಗಲು ನಾವು  ವಿಶ್ವಬ್ಯಾಂಕ್‌ಗೆ ಆರ್ಥಿಕ ನೆರವು ನೀಡಿದ್ದೇವೆ ಎಂದೂ ಅವರು ಹೇಳಿದರು. ಆಧಾರ್‌ನಿಂದ ಖಾಸಗಿತನಕ್ಕೆ ಧಕ್ಕೆ ಆಗದು. ಏಕೆಂದರೆ ಇದು ಜೈವಿಕ ಗುರುತು  ಪರಾಮರ್ಶೆಯ ಯೋಜನೆಯಷ್ಟೇ ಎಂದು ಗೇಟ್ಸ್ ಸ್ಪಷ್ಟಪಡಿಸಿದರು.

loader