. ಈ ಪೈಕಿ ಬಹುತೇಕ ಪಾಲು ಅವರದ್ದೇನೇತೃತ್ವದ ಹೊಂದಿರುವ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್‌ಗೆ ನೀಡಲಾಗಿದೆ

ನವದೆಹಲಿ(ಆ.17): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್, 29, 900 ಕೋಟಿ ರು. ಹಣವನ್ನು ದಾನವಾಗಿ ನೀಡಿದ್ದಾರೆ. ಇದು 2000ನೇ ಇಸವಿಯ ಬಳಿಕ ಬಿಲ್‌ಗೇಟ್ಸ್ ಅವರು ದಾನ ನೀಡುತ್ತಿರುವ ಅತಿ ಹೆಚ್ಚಿನ ಮೊತ್ತವಾಗಿದೆ. ಬಿಲ್‌ಗೇಟ್ಸ್ ತಾವು ಮೈಕ್ರೋಸಾಫ್ಟ್‌ನಲ್ಲಿ ಹೊಂದಿರುವ 6.4 ಕೋಟಿ ಷೇರುಗಳನ್ನು ಜೂ.6ರಂದು ದಾನ ನೀಡಿದ್ದಾರೆ. ಈ ಪೈಕಿ ಬಹುತೇಕ ಪಾಲು ಅವರದ್ದೇನೇತೃತ್ವದ ಹೊಂದಿರುವ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್‌ಗೆ ನೀಡಲಾಗಿದೆ ಎನ್ನಲಾಗಿದೆ.

ಹೀಗಾಗಿ ಮೈಕ್ರೋಸಾಫ್ಟ್‌ನಲ್ಲಿ ಬಿಲ್‌ಗೇಟ್ಸ್ ಅವರ ಷೇರಿನ ಪಾಲು ಇದೀಗ ಕೇವಲ ಶೇ.1.3ಕ್ಕೆ ಇಳಿದಿದೆ. ಬಿಲ್ ಗೇಟ್ಸ್ 1999ರಲ್ಲಿ 16 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದಾನ ಮಾಡಿದ್ದರು. ಬಳಿಕ 2000ನೇ ಇಸವಿಯಲ್ಲಿ 33,150 ಕೋಟಿ ರು. ಹಣವನ್ನು ದತ್ತಿ ಸಂಸ್ಥೆಗೆ ದಾನ ನೀಡಿದ್ದರು.