ಉತ್ತರಪ್ರದೇಶ(ಸೆ. 18): ಎರಡು ದಿನಗಳ ಹಿಂದೆ ಇಲ್ಲಿಯ ಬಿಜ್ನೋರ್ ಜಿಲ್ಲೆಯಲ್ಲಿ ಸಂಭವಿಸಿದ್ದ ಹಿಂದೂ-ಮುಸ್ಲಿಮ್ ಕೋಮುಗಲಭೆ ಘಟನೆ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಒಟ್ಟು 29 ಜನರ ವಿರುದ್ಧ ಎಫ್'ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗತ್ ರಾಮ್ ತ್ರಿಪಾಠಿ ತಿಳಿಸಿದ್ದಾರೆ. ಎಫ್'ಐಆರ್ ದಾಖಲಾಗಿರುವ ಜನರ ಪೈಕಿ ಸನ್ಸಾರ್ ಸಿಂಗ್ ಎಂಬ ವ್ಯಕ್ತಿಯ ಹೆಸರು ಕೇಳಿಬಂದಿದೆ. ಇದೇ ವೇಳೆ, ಗಲಭೆ ಹರಡುವ ಭಯದಿಂದ ಮುನ್ನೆಚ್ಚರಿಕೆಯಾಗಿ ಪ್ರದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನದು ಘಟನೆ?
ಸೆ.16ರಂದು ಬಿಜ್ನೋರ್ ಜಿಲ್ಲೆಯ ಕೋಟ್ವಾಲಿ ತಾಲೂಕಿನ ಪೇಡಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂದು ಬೆಳಗ್ಗೆ ಹಿಂದೂ ಹೆಣ್ಮಕ್ಕಳು ಶಾಲೆಗೆ ಹೋಗುವ ವೇಳೆ ಕೆಲ ಮುಸ್ಲಿಮ್ ಯುವಕರು ರೇಗಿಸಿದ್ದಾರೆ. ವಿಷಯ ತಿಳಿದ ಆ ಹೆಣ್ಮಕ್ಕಳ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಯುವಕರ ವಿರುದ್ಧ ಕಲ್ಲು ತೂರಾಟ ನಡೆಸಿದ್ದಾರೆ. ಇದು ಕೋಮುಗಲಭೆಗೆ ಕಿಡಿ ಹೊತ್ತಿಕೊಂಡಿದೆ. ಹಿಂಸಾಚಾರಗಳಿಂದ ಮೂವರು ಮುಸ್ಲಿಮರು ಹತ್ಯೆಯಾಗಿದ್ದಾರೆ. 12 ಮಂದಿಗೆ ಗಾಯವಾಗಿದೆ.