ಕೆಲ ದಿನಗಳ ಹಿಂದೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ನೇಪಾಳಕ್ಕೆ ಹೋಗಿದ್ದರು. ಆದರೆ ಕಿಚ್ಚ ಹೋಗಿರಲಿಲ್ಲ.
ಕನ್ನಡದ ರಿಯಾಲಿಟಿ ಶೋ 5ನೇ ಆವೃತ್ತಿ ಶೀಘ್ರದಲ್ಲೇ ಮುಗಿಯುವ ಸೂಚನೆ ಕಾಣುತ್ತಿದೆ. ಈಗಾಗಲೇ 12 ವಾರಗಳು ಪೂರ್ಣಗೊಂಡಿದ್ದು 13ನೇ ವಾರಕ್ಕೆ ಒಂದು ದಿನ ಮಾತ್ರ ಬಾಕಿಯಿದೆ. ಮನೆಗೆ ಪ್ರವೇಶಿಸಿದ್ದ 17 ಸ್ಪರ್ಧಿಗಳಲ್ಲಿ 10 ಮಂದಿ ಹೊರ ಹೋಗಿದ್ದಾರೆ. ಇನ್ನುಳಿದಿರುವುದು 7 ಜನ ಮಾತ್ರ.
ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ಮಾಹಿತಿ ಪ್ರಕಾರ ಇನ್ನು ಮೂರ್ನಾಲ್ಕು ವಾರಗಳಲ್ಲಿ ಆವೃತ್ತಿ ಪೂರ್ಣಗೊಳ್ಳಲಿದೆಯಂತೆ. ಗ್ರ್ಯಾಂಡ್ ಫಿನಾಲೆಗೆ ಈಗಾಗಲೇ ಯೋಜನೆಗಳು ತಯಾರುಗೊಂಡಿದ್ದು, ಅದ್ಧೂರಿಯಾಗಿ, ವಿಭಿನ್ನವಾಗಿ ಆಯೋಜಿಸುವ ಯೋಜನೆ ನಿರೂಪಕ ಹಾಗೂ ಕಾರ್ಯಕ್ರಮ ನಿರ್ದೇಶಕರದು.
ಸುದೀಪ್ ಕೂಡ ಬೇರೆ ಕೆಲಸಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ
ಬಿಗ್ ಬಾಸ್ ಶೋಯಿಂದಾಗಿ ಕಿಚ್ಚ ಸುದೀಪ್ ತನ್ನ ಖಾಸಗಿ ಕೆಲಸಗಳಿಗೆ ಟೈಮ್ ಕೊಡದಿಕ್ಕೆ ಆಗುತ್ತಿಲ್ಲವಂತೆ. ಕೆಲ ದಿನಗಳ ಹಿಂದೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ನೇಪಾಳಕ್ಕೆ ಹೋಗಿದ್ದರು. ಆದರೆ ಕಿಚ್ಚ ಹೋಗಿರಲಿಲ್ಲ. ಬಿಗ್ ಬಾಸ್ ಕಮಿಟ್'ಮೆಂಟ್ ಇದಕ್ಕೆ ಕಾರಣವಾಗಿದೆ. ಕೆಲವು ಸಿನಿಮಾ ಶೂಟಿಂಗ್'ಗಳು ಕೂಡ ಮುಂದಕ್ಕೆ ಹೋಗಿದೆ. ಕೆಲವು ದಿನಗಳಲ್ಲಿ ಕಾರ್ಯಕ್ರಮ ಮುಗಿದ ನಂತರ ಬೇರೆ ಕೆಲಸದ ಕಡೆ ಗಮನ ಕೊಡಲಿದ್ದಾರಂತೆ.
