ಪಾಟ್ನಾ, [ಡಿ.09]: ಒಂದೇ ದಿನದಲ್ಲಿ ಸಪ್ತಪದಿ ತುಳಿಯಬೇಕಿದ್ದ ನಿವೃತ್ತ ಐಜಿಪಿ ಪುತ್ರಿ ಅಕಾಲಿಕ ಮೃತ್ಯುವಿಗೆ ತುತ್ತಾಗಿರುವ ಘಟನೆ ಬಿಹಾರಾದ ಪಾಟ್ನಾದಲ್ಲಿ ನಡೆದಿದೆ.

ಆ ನಿವೃತ್ತ ಐಜಿಪಿ ಮಗಳು ವಾಸವಾಗಿದ್ದ 14ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದು, ಇದ್ರಿಂದ ಬಿಹಾರದ ನಿವೃತ್ತ ಐಜಿಪಿ ಉಮಾಶಂಕರ್​​ ಸುಧಾಂಶು ಅವರ ಪುತ್ರಿಯ ಅದ್ಧೂರಿ ಮದುವೆ ಈಗ ಕನಸಾಗಿಯೇ ಉಳಿದಿದೆ.

ಇನ್ನು ಆಕೆಯ ಸಾವು ಆತ್ಮಹತ್ಯೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಆದರೆ ಐಜಿಪಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆಟ್​​ನೋಟ್​​ ಸೇರಿದಂತೆ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯೂ ಪೊಲೀಸರಿಗೆ ಸಿಕ್ಕಿಲ್ಲ.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.