2 ಕೋಟಿ: ಗಣ್ಯರು, ಸಾರ್ವಜನಿಕರು ಮಾನವ ಸರಪಳಿಯಲ್ಲಿ ಭಾಗಿ47 ಉಪಕರಣ: 3 ಉಪ ಗ್ರಹ, 4 ವಿಮಾನ, 40 ಡ್ರೋನ್‌ಗಳು ಸಾಕ್ಷಿ
ಪಟನಾ(ಜ.22): ಮದ್ಯವಿರೋಧಿ ಜಾಗೃತಿಗಾಗಿ 38 ಜಿಲ್ಲೆಗಳಲ್ಲಿ 11,292 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಬಿಹಾರ ಹೊಸ ದಾಖಲೆ ಸೃಷ್ಟಿಸಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿ ಹಲವು ಪಕ್ಷಗಳ ನಾಯಕರು ಹಾಗೂ 2 ಕೋಟಿಗೂ ಅಧಿಕ ಜನ ವಿಶ್ವದ ಅತಿ ಉದ್ದದ ಮಾನವ ಸರಪಳಿ ರಚಿಸಿದ್ದಾರೆ. ವಿಶೇಷವೆಂದರೆ, ಇಸ್ರೋದ ಮೂರು ಉಪಗ್ರಹಗಳು, ನಾಲ್ಕು ತರಬೇತಿ ವಿಮಾನಗಳು, ಕಾಪ್ಟರ್ಗಳು ಹಾಗೂ 40 ಡ್ರೋನ್ಗಳು ಈ ಅಭೂತಪೂರ್ವ ದಾಖಲೆಯನ್ನು ಸೆರೆಹಿಡಿದವು.
ಸುಮಾರು 3 ಸಾವಿರ ಕಿ.ಮೀ.ನ ರಾಷ್ಟ್ರೀಯ ಹೆದ್ದಾರಿ, 8,285 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು ಇತರೆ ರಸ್ತೆಗಳಲ್ಲಿ ಕೋಟಿಗಟ್ಟಲೆ ಮಂದಿ ಪರಸ್ಪರ ಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿದರು. ಬಿಹಾರದ 11 ಕೋಟಿ ಜನಸಂಖ್ಯೆಯ ಪೈಕಿ 2.5 ಕೋಟಿಯಷ್ಟುಮಂದಿ ಇದರಲ್ಲಿ ಭಾಗಿಯಾಗುವ ಮೂಲಕ ಗಿನ್ನೆಸ್ ದಾಖಲೆ ಮಾಡಿದರು. 2004ರಲ್ಲಿ 10 ಸಾವಿರ ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಬಾಂಗ್ಲಾದೇಶವು ಮಾಡಿದ್ದ ದಾಖಲೆಯನ್ನು ಬಿಹಾರವು ಇದೇ ಸಂದರ್ಭದಲ್ಲಿ ಮುರಿಯಿತು.
