ನವದೆಹಲಿ :  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ  ಎನ್ ಡಿ ಎ ಮಿತ್ರ ಪಕ್ಷವಾದ ಜೆಡಿಎಯು ಮುಖಂಡ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದಿಲ್ಲಿಗೆ ಆಗಮಿಸಿದ್ದು 2 ದಿನಗಳ ಕಾಲ ದಿಲ್ಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ಇದೇ ವೇಳೆ ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಸೀಟು ಹಂಚಿಕೆ ಕುರಿತಂತೆ ಅಂತಿಮ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. 

ಇತ್ತೀಚೆಗಷ್ಟೇ  ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಶಾಂತ್ ಕಿಶೋರ್ ಅವರೂ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. 

ಇತ್ತೀಚಿನ ಸುದ್ದಿಯಂತೆ ಬಿಜೆಪಿ ಹಾಗೂ ಜೆಡಿಯು ಬಿಹಾರದಲ್ಲಿ ಸೀಟುಗಳ ಹಂಚಿಕೆಯಲ್ಲಿ  50 - 50 ಸೂತ್ರವನ್ನು ಅನುಸರಿಸಲಿದ್ದಾರೆ ಎನ್ನಲಾಗಿದೆ. 17, 17 ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡು ಉಳಿದ 6 ಸ್ಥಾನಗಳನ್ನು ಎಲ್ ಜೆ ಪಿ, ಆರ್ ಎಲ್ ಎಸ್ ಪಿಗೆ ಬಿಟ್ಟು ಕೊಡುವ ಸಾಧ್ಯತೆಗಳಿದೆ ಎನ್ನಲಾಗಿದೆ.