ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಮಾಡಿಕೊಂಡಿದ್ದ ಸಿಐಎಸ್ ಎಫ್ ನ ಬಲಬೀರ್ ಎನ್ನುವ  ಯೋಧನೊಬ್ಬ ತಾಳ್ಮೆ ಕಳೆದುಕೊಂಡು ತನ್ನ ಸಹೋದ್ಯೀಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಔರಂಘಾಬಾದ್ ಜಿಲ್ಲೆಯ ನವಿನಗರ್ ವಿದ್ಯುತ್ ಉತ್ಪಾದನಾ ಕಂಪನಿ ಆವರಣದೊಳಗೆ ನಡೆದಿದೆ.

ನವದೆಹಲಿ (ಜ.12): ತಾಳ್ಮೆ ಕಳೆದುಕೊಂಡ ಸಿಐಎಸ್ ಎಫ್ ಯೋಧನೊಬ್ಬ ತನ್ನ ಸಿಟ್ಟಿಗೆ ಬಂದೂಕನ್ನು ನೀಡಿದ್ದಾನೆ. ಪರಿಣಾಮವಾಗಿ ನಾಲ್ವರು ಸಹೋದ್ಯೋಗಿಗಳು ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಮಾಡಿಕೊಂಡಿದ್ದ ಸಿಐಎಸ್ ಎಫ್ ನ ಬಲಬೀರ್ ಎನ್ನುವ ಯೋಧನೊಬ್ಬ ತಾಳ್ಮೆ ಕಳೆದುಕೊಂಡು ತನ್ನ ಸಹೋದ್ಯೀಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಔರಂಘಾಬಾದ್ ಜಿಲ್ಲೆಯ ನವಿನಗರ್ ವಿದ್ಯುತ್ ಉತ್ಪಾದನಾ ಕಂಪನಿ ಆವರಣದೊಳಗೆ ನಡೆದಿದೆ.

ಮೃತಪಟ್ಟವರು ಬಚ್ಚಾ ಶರ್ಮಾ, ಎನ್. ಮಿಶ್ರಾ, ಅರವಿಂದ್ ಕುಮಾರ್, ಮತ್ತು ಜಿ. ಎಸ್ ರಾಮ್ ಎಂದು ಗುರುತಿಸಲಾಗಿದೆ. ಬಲಬೀರ್ ನನ್ನು ಬಂಧಿಸಲಾಗಿದೆ.