ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಕಳ್ಳ ಸಾಗಾಣೆಯಾಗುತ್ತಿದ್ದ ಮಾದಕ ವಸ್ತುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು .24 ಕೋಟಿ ಮೌಲ್ಯದ 475 ಕೇಜಿ ಮಾದಕ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು(ಜೂ.25): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಕಳ್ಳ ಸಾಗಾಣೆಯಾಗುತ್ತಿದ್ದ ಮಾದಕ ವಸ್ತುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು .24 ಕೋಟಿ ಮೌಲ್ಯದ 475 ಕೇಜಿ ಮಾದಕ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಸುಂಕ ಅಧಿಕಾರಿಗಳು ನಡೆಸಿದ ಅತಿ ದೊಡ್ಡ ಬೇಟೆ ಇದಾಗಿದೆ. ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, ದಕ್ಷಿಣ ಭಾರತದಲ್ಲಿಯೇ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದಕ ವಸ್ತು ಕಳ್ಳಸಾಗಾಣೆ ಜಾಲ ಪತ್ತೆಗೆ ಬೆನ್ನು ಹತ್ತಿರುವ ಅಧಿಕಾರಿಗಳು ಇದೀಗ ಮೂರು ತಂಡಗಳ ನ್ನಾಗಿ ರಚಿಸಿದ್ದು, ಆರೋಪಿಗಳ ಶೋಧಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಜೂ.23ರಂದು ವಿಮಾನ ನಿಲ್ದಾಣದ ಕಾರ್ಗೋ ಸಮುಚ್ಛಯದಲ್ಲಿನ ರಫ್ತು ಮಾಡುವ ಘಟಕದಲ್ಲಿ 81 ಅಮೋನಿಯಂ ಕ್ಲೊರೈಡ್‌ ಬ್ಯಾಗ್‌ಗಳ ಪೈಕಿ ಎರಡು ಬ್ಯಾಗ್‌ನಲ್ಲಿ ಮಾದಕ ವಸ್ತುಗಳನ್ನಿಟ್ಟು ಮಲೇಷಿ ಯಾಕ್ಕೆ ಕಳ್ಳ ಸಾಗಾಣೆ ಮಾಡಲು ಪ್ರಯತ್ನಿ ಸಲಾಗಿತ್ತು. ಆದರೆ, ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ರಫ್ತು ಮಾಡುವ ಘಟಕವನ್ನು ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

ಬ್ಯಾಗ್‌ನಲ್ಲಿ .2.50 ಕೋಟಿ ಮೌಲ್ಯದ 50 ಕೆಜಿ ಮಾದಕ ವಸ್ತು ಪತ್ತೆಯಾಗಿದೆ. ಇನ್ನುಳಿದ 425 ಕೆಜಿ ಮಾದಕ ವಸ್ತುವನ್ನು ನಗರದ ಕೊತ್ತನೂರಿನಲ್ಲಿನ ಗೋದಾಮಿ ನಿಂದ ವಶಪಡಿಸಿಕೊಳ್ಳಲಾಗಿದೆ. ಇದು 17 ಬ್ಯಾಗ್‌ನಲ್ಲಿದ್ದು, .21.50 ಕೋಟಿ ಎಂದು ಅಂದಾಜಿಸಲಾಗಿದೆ. ಮಲೇಷಿಯಾಗೆ ಅಕ್ರಮವಾಗಿ ರಫ್ತು ಮಾಡಲು ಮುಂದಾ ಗಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಅವ ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊತ್ತನೂರಿನಲ್ಲಿನ ಗೋದಾಮಿನ ವಿಷಯ ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಸುಂಕ ಅಧಿಕಾರಿಗಳು ಕಾರ್ಯಾಚರಣೆ ಕೈಗೊ ಂಡು ಗೋದಾಮು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಬಿ ಕಾಯ್ದೆ 1985ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಕೇಂದ್ರ ಗುಪ್ತಚರ ವಿಭಾಗ ಮತ್ತು ವಿಶೇಷ ಗುಪ್ತಚರ, ಕಸ್ಟಮ್ಸ್‌ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.