ಬಿಗ್ ಬಜಾರ್ ನ ಬಿಗ್ ಬಾಸ್ ನಮಗೆಲ್ಲಾ ಪ್ರಧಾನಿಯಾಗಿದ್ದಾರೆ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.

ಪಟ್ನಾ (ನ.30): ನೋಟು ನಿಷೇಧ ಘೋಷಣೆಯಾದಾಗಿನಿಂದ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿರುವ ಮಮತಾ ಬ್ಯಾನರ್ಜಿ ಇಂದು ಪಟ್ನಾ ರ್ಯಾಲಿಯಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಜಾರ್ ನ ಬಿಗ್ ಬಾಸ್ ನಮಗೆಲ್ಲಾ ಪ್ರಧಾನಿಯಾಗಿದ್ದಾರೆ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಷ್ಟು ಕಡೆ ಬಿಗ್ ಬಜಾರ್'ಗಳಿವೆ? ಬಿಗ್ ಬಜಾರ್ ಹೊರತುಪಡಿಸಿ ಎಷ್ಟು ಕಡೆ ನಗದು ಹಣ ಸಿಗುತ್ತಿದೆ? ಎಲ್ಲಾ ಕೋ ಆಪರೇಟಿವ್ ಬ್ಯಾಂಕುಗಳನ್ನು ಮುಚ್ಚಿಸಿ ಬಿಗ್ ಬಜಾರನ್ನೇ ಬಿಗ್ ಬ್ಯಾಂಕನ್ನಾಗಿ ಪರಿವರ್ತಿಸಿಸಲಾಗಿದೆ. ಬಿಗ್ ಬಜಾರ್'ನ ಬಿಗ್ ಬಾಸ್ ನಮಗೆ ಪ್ರಧಾನಿಯಾಗಿದ್ದಾರೆ ಎಂದು ರ್ಯಾಲಿಯನ್ನುದ್ದೇಶಿಸಿ ದೀದಿ ಆರೋಪಿಸಿದ್ದಾರೆ.

ಎಟಿಎಂ ಎದುರು ಜನರು ಕ್ಯೂ ನಿಲ್ಲುವುದನ್ನು ತಪ್ಪಿಸಿ ಅವಿಗೆ ಅನುಕೂಲವಾಗಲೆಂದು ಬಿಗ್ ಬಜಾರ್ ಮಳಿಗೆಗಳಲ್ಲಿ 500 ಹಾಗೂ 1000 ರೂ ನೋಟನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಆಧರಿಸಿ ಮಮತಾ ಬ್ಯಾನರ್ಜಿ ಮೋದಿ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.