ಬೆಂಗಳೂರು :  ಬಡ್ತಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇವೆ. ಇದೇ ವೇಳೆ ಪಟ್ಟು ಬಿಡದೆ ಹೋರಾಟ ಮಾಡಿ ಎಸ್‌ಸಿ,ಎಸ್‌ಟಿ ವರ್ಗಕ್ಕೆ ಗೆಲುವು ತಂದುಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು ಸಿದ್ದರಾಮಯ್ಯ ಅವರ ಗೆಲುವು ಎಂದಿರುವ ಅವರು, ಬಡ್ತಿ ಮೀಸಲಾತಿ ಮುಂದುವರೆಸುವ ಬಗ್ಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಯಿದೆ ಜಾರಿಗೆ ತಂದಿದ್ದರು. ಜತೆಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುವ ಮೂಲಕ ಬಡ್ತಿ ಮೀಸಲಾತಿ ಪರ ನಿಂತಿದ್ದರು. ಪ್ರಸ್ತುತ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಕಾಂಗ್ರೆಸ್‌ ಸದಾ ಬಡವ, ಶೋಷಿತ ವರ್ಗಗಳ ಪರವಾಗಿರುತ್ತದೆ ಎಂದು ಸಾಬೀತಾಗಿದೆ.

ಜತೆಗೆ ಇದು ಸಿದ್ದರಾಮಯ್ಯ ಅವರ ಗೆಲುವು ಎಂಬುದನ್ನೂ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ ಎಂದು ಹೇಳಿದರು.