ಯೋಗಿಶ್ ಗೌಡ ಕೊಲೆ ಕೇಸಲ್ಲಿ ರೋಚಕ ಟ್ವಿಸ್ಟ್..! ವಿನಯ್ ಕುಲಕರ್ಣಿ ರಕ್ಷಣೆಗೆ ನಿಂತ ಮಲ್ಲಮ್ಮ

First Published 23, Jan 2018, 8:25 AM IST
Big Twist to Yogesh Gowda Murder Case
Highlights

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ ಗೌಡ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್  ಸಿಕ್ಕಿದೆ. ತನ್ನ ಗಂಡನ ಕೊಲೆಗೆ ನ್ಯಾಯ ಕೇಳಿದ್ದ ಮಲ್ಲಮ್ಮ ಅವರೇ ಇದೀಗ ಉಲ್ಟಾ ಹೊಡೆದಿದ್ದಾರೆ. ಕೋರ್ಟ್​​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ವಿನಯ್​ ಕುಲಕರ್ಣಿ ಪರ ಬ್ಯಾಂಟಿಂಗ್​​ ಬೀಸಿದ್ದಾರೆ.

ಧಾರವಾಡ (ಜ.23): ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ ಗೌಡ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್  ಸಿಕ್ಕಿದೆ. ತನ್ನ ಗಂಡನ ಕೊಲೆಗೆ ನ್ಯಾಯ ಕೇಳಿದ್ದ ಮಲ್ಲಮ್ಮ ಅವರೇ ಇದೀಗ ಉಲ್ಟಾ ಹೊಡೆದಿದ್ದಾರೆ. ಕೋರ್ಟ್​​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ವಿನಯ್​ ಕುಲಕರ್ಣಿ ಪರ ಬ್ಯಾಂಟಿಂಗ್​​ ಬೀಸಿದ್ದಾರೆ.

ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​​ ಗೌಡ ಅವರ ಚಾರಿತ್ರ್ಯ ವಧೆಗೆ ಖುದ್ದು ಅವರ ಪತ್ನಿಯೇ ಮುಂದಾಗಿದ್ದಾರೆ. ಸಚಿವ ವಿನಯ್​ ಕುಲಕರ್ಣಿ ನನ್ನ ಗಂಡನನ್ನ ಕೊಲ್ಲಿಸಿದ್ದಾರೆ ಎಂದು ಬೊಬ್ಬಿರಿದಿದ್ದ ಮಲ್ಲಮ್ಮ, ಇದೀಗ ಆರೋಪಿತರ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಕರಣ ಸಿಬಿಐಗೆ ವಹಿಸುವಂತೆ ಯೋಗೀಶ್​​ ಗೌಡ ತಾಯಿ ತುಂಗಮ್ಮ ರಿಟ್​​ ಅರ್ಜಿ ಸಲ್ಲಿಸಿದ್ದರು.  ಈ ಸಂಬಂಧ ಧಾರವಾಡ ಹೈಕೋರ್ಟ್​ ಪೀಠಕ್ಕೆ ಮಲ್ಲಮ್ಮ ಪ್ರಮಾಣ ಪತ್ರ ಸಲ್ಲಿಸಿದ್ದು ತನ್ನನ್ನೂ ಪ್ರತಿವಾದಿಯಾಗಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಯೋಗಿಶ್​​ ಗೌಡ ಹಾಗೂ ವಿನಯ್​ ಕುಲಕರ್ಣಿ ಮಧ್ಯೆ ದ್ವೇಷವೇ ಇರಲಿಲ್ಲ..!

ವಿನಯ್​ ಕುಲಕರ್ಣಿ ವಿರುದ್ಧ ಇಂಗ್ಲೀಷ್​ನಲ್ಲಿ ದೂರು ಬರೆದು ನನ್ನ ಸಹಿ ಪಡೆದಿದ್ದಾರೆ. ಗುರುನಾಥ್​ ಗೌಡ ರಾಜಕೀಯ ಲಾಭಕ್ಕೆ ಕೊಲೆ ಕೇಸ್​ ಬಳಸಿಕೊಳ್ಳುತ್ತಿದ್ದಾರೆ. ಈ ಮಾತುಗಳನ್ನ ಹೇಳಿದ್ದು ಯೋಗೀಶ್​ಗೌಡ ಪತ್ನಿ  ಮಲ್ಲಮ್ಮ. ಹೈಕೋರ್ಟ್​​'ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿನಯ್​ ಕುಲಕರ್ಣಿ ವಿರುದ್ಧ ಇಂಗ್ಲೀಷ್​ನಲ್ಲಿ ದೂರು ಬರೆದುಕೊಂಡು ನನ್ನ ಬಳಿ ಸಹಿ ಮಾಡಿಸಿಕೊಂಡಿದ್ದಾರೆ. ನಾನು ಎಲ್ಲಿಯೂ ವಿನಯ್​​ ಕುಲಕರ್ಣಿ ಹಾಗೂ ಹೆಚ್ ಕೆ ಪಾಟೀಲ್​ ವಿರುದ್ಧ ಆರೋಪ ಮಾಡಿಲ್ಲ ಎಂದಿದ್ದಾರೆ. ಅದೆಲ್ಲಕ್ಕಿಂತ ಅಚ್ಚರಿ ಎಂದ್ರೆ,  ನನ್ನ ಗಂಡ ಯೋಗಿಶ್​ ಗೌಡರ ವಿರುದ್ಧ 27 ಹಾಗೂ ಭಾವ ಗುರುನಾಥ್​ ಗೌಡರ ವಿರುದ್ಧ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ. ನನ್ನ ಗಂಡನ ಹತ್ಯೆ ಕೇಸನ್ನು ರಾಜಕೀಯ ದ್ವೇಷ ಸಾಧನೆಗೆ ಗುರುನಾಥ್​ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ವಿನಯ್​ ಕುಲಕರ್ಣಿ ಕೊಲೆಯ ಮಾಸ್ಟರ್​ ಮೈಂಡ್​ ಎಂದು ನಾನು ಹೇಳಿಲ್ಲ..!

ಇನ್ನೂ ನಾನು ಯಾವಾಗಲೂ ವಿನಯ್​ ಕುಲಕರ್ಣಿ ಯೋಗಿಶ್​​ ಗೌಡ ಕೊಲೆ ಕೇಸಲ್ಲಿ ಮಾಸ್ಟರ್​ ಮೈಂಡ್​ ಎಂದು ಹೇಳಿಯೇ ಇಲ್ಲ ಎಂದೂ ಯೂಟರ್ನ್​ ಹೊಡೆದಿದ್ದಾರೆ. ಈ ಮೂಲಕ ಮಲ್ಲಮ್ಮ ಯೋಗೀಶ್ ​ಗೌಡ ಕೇಸ್​ಗೆ ಮೇಜರ್ ಟ್ವಿಸ್ಟ್ ಕೊಟ್ಟಿದ್ದಾರೆ.ಒಟ್ಟಿನಲ್ಲಿ ಮೂರು ವಾರಗಳ ಕಾಲ ನಾಪತ್ತೆಯಾಗಿದ್ದ ಮಲ್ಲಮ್ಮ ಪ್ರತ್ಯಕ್ಷವಾದಗಲೇ ಸಚಿವ ವಿನಯ್​ ಪರ ಬ್ಯಾಟಿಂಗ್​​ ಬೀಸಿದ್ದರು. ಇದೀಗ ಅಧಿಕೃತವಾಗಿ ಕೋರ್ಟ್​​ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೇ ಮಲ್ಲಮ್ಮ ಕುಟುಂಬದವರ ವಿರುದ್ಧವೇ ತಿರುಗಿ ನಿಂತಿದ್ದು ಬಯಲಾಗಿದೆ.

loader