ಲಿಂಗಾಯತ ಧರ್ಮ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್..!

Big Twist To Lingayat Politics
Highlights

ಲಿಂಗಾಯತ ಧರ್ಮ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಧಾರಕ್ಕೆ ಸಿಎಂ ಮೌನಕ್ಕೆ ಕಾರಣ ಏನು ನ್ನುವ ವಿಚಾರ ಬಹಿರಂಗವಾಗಿದೆ.  ಆಪ್ತ ಸಚಿವರ ಬಳಿ ವಾಸ್ತವ ತೆರೆದಿಟ್ಟ ಸಿಎಂ ಸಿದ್ದರಾಮಯ್ಯ ನಾಗಮೋಹನ್ ದಾಸ್ ವರದಿಯೇ ಸರಿಯಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು : ಲಿಂಗಾಯತ ಧರ್ಮ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಧಾರಕ್ಕೆ ಸಿಎಂ ಮೌನಕ್ಕೆ ಕಾರಣ ಏನು ನ್ನುವ ವಿಚಾರ ಬಹಿರಂಗವಾಗಿದೆ.  ಆಪ್ತ ಸಚಿವರ ಬಳಿ ವಾಸ್ತವ ತೆರೆದಿಟ್ಟ ಸಿಎಂ ಸಿದ್ದರಾಮಯ್ಯ ನಾಗಮೋಹನ್ ದಾಸ್ ವರದಿಯೇ ಸರಿಯಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಅಸಮಾಧಾನಗೊಂಡ  ಲಿಂಗಾಯತ ಸಚಿವರಿಗೆ ತಿಳಿಹೇಳಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆ ಶೇ.8ರಿಂದ 9ರಷ್ಟಿದೆ ಎಂದು ನಾಗಮೋಹನ್ ದಾಸ್ ವರದಿಯಲ್ಲಿ ಹೇಳಿದೆ.  ಈ ಜನಸಂಖ್ಯೆ ಅನಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ.  ಲಿಂಗಾಯತರು ದಲಿತರು ಅಲ್ಪ ಸಂಖ್ಯಾತರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಬಹುದು ಎಂದಿದ್ದಾರೆ.

ಆದರೆ ಅಧಿಕೃತ ಮಾಹಿತಿ ಇಲ್ಲದೇ ಸರ್ಕಾರ ಅನಧಿಕೃತ ಮಾಹಿತಿಯನ್ನ ಆಧಾರವಾಗಿಟ್ಟುಕೊಂಡು ನಿರ್ಧರಿಸಿಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೆ ಈ ವರದಿಯ ಆಧಾರದ ಮೇಲೆ ಶಿಫಾರಸು ಕಳಿಸಿದರೆ ನಗೆಪಾಟಲಿಗೆ ಈಡಾಗುತ್ತೇವೆ ಎಂದಿದ್ದಾರೆ. ಅಲ್ಲದೇ ಕಾನೂನು ಸಲಹೆ ಪಡೆದೆ ಮುಂದೆ ಹೆಜ್ಜೆಯಿಡೋಣ ಎಂದರು. ಇನ್ನು ಕ್ಯಾಬಿನೆಟ್’ನಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳದಿರಲು ಸಿಎಂ ನಿರ್ಧರಿಸಿದ್ದಾರೆ.

loader