ಅಕ್ಕ ಸಿಗಲಿಲ್ಲ : ತಂಗಿಯನ್ನೂ ಬಿಟ್ಟು ಮಂಟಪದಿಂದ ವರ ಪರಾರಿ

First Published 28, Jan 2018, 11:05 AM IST
Big Twist For Kolar Marriage
Highlights

ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದ ನವಮಧು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಕ್ಕಿದೆ. ನವವಧು ನಾಪತ್ತೆಯಾಗಿದ್ದಾಳೆ ಅಂತ ಮದುವೆಗೆ ಬಂದವರೆಲ್ಲಾ ತಲೆಕೆಡಿಸಿಕೊಂಡಿದ್ದರೆ, ಅತ್ತ ವರನೂ ನಾಪತ್ತೆಯಾಗಿದ್ದಾನೆ.

ಕೋಲಾರ : ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದ ನವಮಧು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಕ್ಕಿದೆ. ನವವಧು ನಾಪತ್ತೆಯಾಗಿದ್ದಾಳೆ ಅಂತ ಮದುವೆಗೆ ಬಂದವರೆಲ್ಲಾ ತಲೆಕೆಡಿಸಿಕೊಂಡಿದ್ದರೆ, ಅತ್ತ ವರನೂ ನಾಪತ್ತೆಯಾಗಿದ್ದಾನೆ. ಬಂಗಾರಪೇಟೆ ತಾಲೂಕಿನ ನರ್ನಹಳ್ಳಿಯ  ಸೌಮ್ಯ ಹಾಗೂ ಗುರೇಶ್​ ಮದುವೆ ಇವತ್ತು ನಡೆಯಬೇಕಿದ್ದು ನಿನ್ನೆ ಆರತಕ್ಷತೆ ಕೂಡಾ ನಡೆದಿತ್ತು.

 ಆದರೆ ಬೆಳ್ಳಂಬೆಳಗ್ಗೆ ವಧು ಸೌಮ್ಯ ನಾಪತ್ತೆಯಾಗಿದ್ದಳು. ಪದ್ಮಾವತಿ ಕಲ್ಯಾಣ ಮಂಟಪಕ್ಕೆ ಬರಬೇಕಿದ್ದ ವಧು ಸೌಮ್ಯ ಮನೆಯಿಂದ ಕಾಣೆಯಾಗಿದ್ದಳು. ಹೀಗಾಗಿ ಮನೆಯವರೆಲ್ಲಾ ಸೇರಿ, ಸೌಮ್ಯಳ ತಂಗಿ ವೆಂಕಟ ರತ್ನಮ್ಮಳನ್ನು ಗುರೇಶ್​ಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು.

ಬೆಳಗ್ಗೆ ಅರಶಿಣಶಾಸ್ತ್ರ ಕೂಡಾ ನಡೆದಿತ್ತು. ಆದರೆ ವರ ಗುರೇಶ್​ಗೆ ಮಾತ್ರ ವೆಂಕಟ ರತ್ನಮ್ಮಳನ್ನು ಮದುವೆ ಆಗೋದು ಇಷ್ಟ ಇರಲಿಲ್ಲ. ಹೀಗಾಗಿ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ಮದುವೆ ಮಂಠಪದಿಂದ ಎಸ್ಕೇಪ್​ ಆಗಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader