ಬಿಜೆಪಿ ಜಿಲ್ಲಾಧ್ಯಕ್ಷನ ಕಿಡ್ನಾಪ್ ಕೇಸ್’ಗೆ ಹೊಸ ಟ್ವಿಸ್ಟ್

First Published 11, Apr 2018, 12:41 PM IST
Big Twist For BJP District President Kidnap Case
Highlights

ಬೆಂಗಳೂರು ಗ್ರಾಮಾಂತರ ಬಿಜೆಪಿ ಎಸ್’ಸಿ ಘಟಕದ ಜಿಲ್ಲಾಧ್ಯಕ್ಷ ಕಿಡ್ನಾಪ್ ಕೇಸ್’ಗೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. 

ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಬಿಜೆಪಿ ಎಸ್’ಸಿ ಘಟಕದ ಜಿಲ್ಲಾಧ್ಯಕ್ಷ ಕಿಡ್ನಾಪ್ ಕೇಸ್’ಗೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. 

ಜಿಲ್ಲಾಧ್ಯಕ್ಷ ಮುನಿಕೃಷ್ಣ ಅವರನ್ನು ಯಾರೂ ಕೂಡ ಅಪಹರಣ ಮಾಡಿಲ್ಲ ಎನ್ನುವ ವಿಚಾರವೀಗ ಬಹಿರಂಗವಾಗಿದೆ. ಆದರೆ ಅವರನ್ನು ಪೊಲೀಸರೇ ಅರೆಸ್ಟ್ ಮಾಡಿದ್ದಾರೆ ಎನ್ನುವುದು ಇದೀಗ  ತಿಳಿದುಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸ ಕೋಟೆ ಪೊಲೀಸರಿಂದಲೇ ಜಿಲ್ಲಾಧ್ಯಕ್ಷನ ಅರೆಸ್ಟ್ ಆಗಿದೆ. ಮುನಿಕೃಷ್ಣ ವಿರುದ್ಧ ಹಲವು ವಾರೆಂಟ್’ಗಳು ಇದ್ದ ಕಾರಣದಿಂದ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಭೀಮಾಶಂಕರ್ ಸ್ಪಷ್ಟನೆ ನೀಡಿದ್ದಾರೆ.

loader