Asianet Suvarna News Asianet Suvarna News

ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ಟ್ವಿಸ್ಟ್: ಅಕ್ರಮ ಸಂಬಂಧಕ್ಕೆ ವಿರೋಧಿಸಿದ್ದಕ್ಕೆ ತಂಗಿಯಿಂದಲೇ ಅಣ್ಣನ ಹತ್ಯೆ

ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಅಡ್ಡ ಬಂದಿದ್ದಕ್ಕೆ ಸ್ವತಃ ತಂಗಿಯೇ ಪ್ರಿಕರನ ಜೊತೆ ಸೇರಿ ಅಣ್ಣನ ಹತ್ಯೆ ಮಾಡಿಸಿದ್ದಾಳೆ.

Big Twist BJP Activist Karthik Raj Murder Case
  • Facebook
  • Twitter
  • Whatsapp

ಮಂಗಳೂರು(ಎ.29): ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಅಡ್ಡ ಬಂದಿದ್ದಕ್ಕೆ ಸ್ವತಃ ತಂಗಿಯೇ ಪ್ರಿಕರನ ಜೊತೆ ಸೇರಿ ಅಣ್ಣನ ಹತ್ಯೆ ಮಾಡಿಸಿದ್ದಾಳೆ.

ತಂಗಿ ಕಾವ್ಯ, ಹಾಗೂ ಆಕೆಯ ಪ್ರಿಯಕರ ಗೌತಮ್, ಕಾರ್ತಿಕ್​ ರಾಜ್​ನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಂದು ತಂಗಿ ಕಾವ್ಯ ಹಾಗೂ ತಂಗಿಯ ಪ್ರಿಯಕರ ಗೌತಮ್​ನನ್ನು ಬಂಧಿಸಿದ್ದಾರೆ.

2016ರ ಆಗಸ್ಟ್ 23ರಂದು ಕೊಣಾಜೆಯಲ್ಲಿ ಕಾರ್ತಿಕ್ ರಾಜ್ ಬರ್ಬರ ಹತ್ಯೆಯಾಗಿತ್ತು. ಕಾರ್ತಿಕ್ ರಾಜ್ ಹತ್ಯೆ ಕೇಸ್ ರಾಜ್ಯ ಮಟ್ಟದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು. ಬಿಜೆಪಿ, ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.

 

Follow Us:
Download App:
  • android
  • ios