ಬಿಎಸ್'ವೈ ಪಿಎ ಸಂತೋಷ್'ಗೆ ಬಿಗ್ ರಿಲೀಫ್

Big Relief For BSY PA
Highlights

ಪೋಲಿಸರು ತನಿಖೆಗೆ ಸರಿಯಾಗಿ ಸಹಕರಿಸುತಿಲ್ಲ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ನೀಡದಿರುವುದಕ್ಕೆ ಹೆಚ್ಚಿನ ತನಿಖೆಗೆ ಜಾಮೀನು ರದ್ದು ಅರ್ಜಿ ಕೋರಿದ್ದರು.

ಬೆಂಗಳೂರು(ಮಾ.02): ವಿನಯ್ ಎಂಬಾತನ ಅಪಹರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಸಂತೋಷ್'ಗೆ ಬಿಗ್ ರಿಲೀಫ್ ಸಿಕ್ಕಿದೆ.

ನಿರೀಕ್ಷಣಾ ಜಾಮೀನು ರದ್ದು ಕೋರಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು  61ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ಎ.ಚಿಕ್ಕೋರ್ಡೆ ವಜಾಗೊಳಿಸಿ ಆದೇಶಿಸಿದ್ದಾರೆ. ಪೋಲಿಸರು ತನಿಖೆಗೆ ಸರಿಯಾಗಿ ಸಹಕರಿಸುತಿಲ್ಲ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ನೀಡದಿರುವುದಕ್ಕೆ ಹೆಚ್ಚಿನ ತನಿಖೆಗೆ ಜಾಮೀನು ರದ್ದು ಅರ್ಜಿ ಕೋರಿದ್ದರು.

ಎನ್.ಆರ್. ಸಂತೋಷ್ ಬಿಜೆಪಿ ರಾಜ್ಯಾಧಕ್ಷರಾದ ಯಡಿಯೂರಪ್ಪ ಅವರ ಪಿಎ ಹಾಗೂ ಸಂಬಂಧಿ ಕೂಡ.

loader