Asianet Suvarna News Asianet Suvarna News

ಕುತೂಹಲ ಹುಟ್ಟಿಸಿದ ಇಬ್ರಾಹಿಂ-ದೇವೇಗೌಡ ಭೇಟಿ

ಕೆಂಗೇರಿಯಲ್ಲಿ ಎಸ್ಡಿಎಂ ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದರು

Big Meet Between CM Ibrahim and HD Deve Gowda
  • Facebook
  • Twitter
  • Whatsapp

ಬೆಂಗಳೂರು(ಮೇ.07): ಸಿದ್ದರಾಮಯ್ಯ ಅವರ ಆಪ್ತರೆನಿಸಿದ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಸಾರಥ್ಯ ವಹಿಸಿದ್ದಾರೆ. ಶನಿವಾರ ಸಂಜೆ ಕೆಂಗೇರಿಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಇಬ್ರಾಹಿಂ ಅವರು ಸುಮಾರು ಎರಡು ತಾಸುಗಳವರೆಗೂ ಮಾತುಕತೆ ನಡೆಸಿದರು.

ಇದಾದ ನಂತರ ನೇರವಾಗಿ ಅವರು ಕೆ.ಆರ್ ನಗರಕ್ಕೆ ಸಂಚಾರ ಬೆಳೆಸಿ ತಡರಾತ್ರಿವರೆಗೂ ಕಾಂಗ್ರೆಸ್ ತೊರೆಯಲು ಸಜ್ಜಾಗಿರುವ ಮಾಜಿ ಸಂಸದ ವಿಶ್ವನಾಥ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಎಲ್ಲಾ ಬೆಳವಣಿಗೆಗಳು ಮಂಗಳವಾರದ ಕುಮಾರಸ್ವಾಮಿ ಅವರ ಭೇಟಿಯ ಕುರಿತೇ ಆಗಿತ್ತು. ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರೊಂದಿಗಿನ ಮಂಗಳವಾರದ ಭೇಟಿಯ ನಂತರ ಮಹತ್ವದ ಬೆಳವಣಿಗೆಗಳು ನಡೆಯಲಿದ್ದು, ಹಲವು ಕಾಂಗ್ರೆಸ್ ಶಾಸಕರು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Follow Us:
Download App:
  • android
  • ios