ಟಿ ನಗರ್, ಅಣ್ಣಾ ನಗರದ ಹಲವೆಡೆ ದಾಳಿ ನಡೆದಿದ್ದು, ದಾಳಿ ವೇಳೆ 90 ಕೋಟಿ ರೂಪಾಯಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 10 ಕೋಟಿ ರೂಪಾಯಿಯಷ್ಟು ಹೊಸ ಸಾವಿರ ರೂಪಾಯಿಯ ನೋಟುಗಳೂ ಸೇರಿವೆ. ಜೊತೆಗೆ 30 ಕೋಟಿ ಮೌಲ್ಯದ 100 ಕೆ.ಜಿ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ.
ಚೆನ್ನೈ(ಡಿ.08): ನೋಟ್ ಬ್ಯಾನ್ ಕಾಳಧನಿಕರ ಚಲನವಲನದ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚೆನ್ನೈನಲ್ಲಿ ಜುವೆಲ್ಲರಿ ಮಳಿಗೆಗಳು ಸೇರಿ 8 ಕಡೆ ದಾಳಿ ನಡೆಸಿದ್ದಾರೆ.
ಟಿ ನಗರ್, ಅಣ್ಣಾ ನಗರದ ಹಲವೆಡೆ ದಾಳಿ ನಡೆದಿದ್ದು, ದಾಳಿ ವೇಳೆ 90 ಕೋಟಿ ರೂಪಾಯಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 10 ಕೋಟಿ ರೂಪಾಯಿಯಷ್ಟು ಹೊಸ ಸಾವಿರ ರೂಪಾಯಿಯ ನೋಟುಗಳೂ ಸೇರಿವೆ. ಜೊತೆಗೆ 30 ಕೋಟಿ ಮೌಲ್ಯದ 100 ಕೆ.ಜಿ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ.
ಒನ್ ಶ್ರೀನಿವಾಸ ರೆಡ್ಡಿ, ಸಹಚರ ಶೇಖರ್ ರೆಡ್ಡಿ, ಏಜೆಂಟ್ ಪ್ರೇಮ್ ಎಂಬುವವರಿಂದ ಹೋಟೆಲ್`ವೊಂದರಲ್ಲಿ 70 ಕೆ.ಜಿ ಗೋಲ್ಡ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.