ಟಾಸ್ಕಗಳ ಮೂಲಕ ಎಲ್ಲರಿಗೂ ಆಹಾರವನ್ನು ನೀಡಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಆದರೆ ಬಿಗ್'ಬಾಸ್'ನ ನಿಯಮಗಳು ನೋಡುಗರಿಗಷ್ಟೆ ಸೀಮಿತವಾಗಿದ್ದು ಸ್ಪರ್ಧಿಗಳಿಗೆ ಹೊರಗಿನ ಸಂಪರ್ಕಗಳನ್ನು ನೀಡಲಾಗಿರುವ ಮಾತುಗಳು ಕೇಳಿಬರುತ್ತಿವೆ.
ಒಂದು ಬೃಹತ್ತಾದ ಮನೆ, ಹತ್ತಾರು ಕ್ಯಾಮರಾಗಳು, ಪ್ರತಿ ಸ್ಪರ್ಧಿಗಳ ಬಳಿಯಲ್ಲೂ ಮೈಕ್ರೋ ಫೋನ್. ಪ್ರತಿಯೊಂದು ಖಾಸಗಿ ವಿಷಯವೂ ಕ್ಯಾಮರಾಗಳಲ್ಲಿ ಹಾಗೂ ಧ್ವನಿಯೊಂದಿಗೆ ಬಯಲಾಗುತ್ತದೆ. ಬಹುತೇಕ ಮುಖ್ಯ ಘಟನೆಗಳಲೆಲ್ಲಾ ನೋಡುಗರಿಗೆ ತಿಳಿಯುವುದು. ಇದು ಕನ್ನಡ ರಿಯಾಲಿಟಿ ಶೋಗಳಲಲ್ಲೇ ಹೆಚ್ಚು ಖ್ಯಾತಿ ಪಡೆದಿರುವ ಕನ್ನಡದ ಬಿಗ್'ಬಾಸ್ ಅಸಲಿಯತ್ತು. ಆದರೆ ನಿಜವಾದ ಅಸಲಿಯತ್ತು ಬಯಲಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ಸ್ಪರ್ಧಿಗಳಿಗೆ ಹೊರ ಪ್ರಪಂಚದ ಸಂಪರ್ಕವಿರದಂತೆ ಮೊಬೈಲ್, ಟೀವಿ, ಕಂಪ್ಯೂಟರ್ ಮುಂತಾದ ಸಂಪರ್ಕ ಸಾಧನಗಳನ್ನು ನೀಡಲಾಗಿರುವುದಿಲ್ಲ. ಟಾಸ್ಕಗಳ ಮೂಲಕ ಎಲ್ಲರಿಗೂ ಆಹಾರವನ್ನು ನೀಡಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಆದರೆ ಬಿಗ್'ಬಾಸ್'ನ ನಿಯಮಗಳು ನೋಡುಗರಿಗಷ್ಟೆ ಸೀಮಿತವಾಗಿದ್ದು ಸ್ಪರ್ಧಿಗಳಿಗೆ ಹೊರಗಿನ ಸಂಪರ್ಕಗಳನ್ನು ನೀಡಲಾಗಿರುವ ಮಾತುಗಳು ಕೇಳಿಬರುತ್ತಿವೆ. ಸ್ಪರ್ಧಿಗಳಿಗೆ ಮೊಬೈಲ್ ನೀಡಲಾಗುತ್ತಿದೆಯಂತೆ!. ಒಂದು ದೃಶ್ಯದಲ್ಲಿ ಸ್ಪರ್ಧಿ ನಿರಂಜನ್ ದೇಶಪಾಂಡೆ ಮತ್ತೊಬ್ಬಳು ಸ್ಪರ್ಧಿ ಕಾರುಣ್ಯಗೆ ಮೊಬೈಲ್ ತಗೆದುಕೊಂಡು ಬಾ ಎಂದು ಹೇಳಿದ ದೃಶ್ಯ ಎಲ್ಲಡೆ ಚರ್ಚೆಯಾಗುತ್ತಿದೆ. ಹಾಗಾದರೆ ಬಿಗ್ ಬಾಸ್ ಆಟದಲ್ಲಿ ಅಸಲಿಯತ್ತಿಲ್ಲವೆ.
