ಅದು ಹೇಳಿಕೊಳ್ಳೋಕೆ ಮಾತ್ರ ಆಸ್ಪತ್ರೆಯಾಗಿತ್ತು. ಅಲ್ಲಿಗೆ ಹೋಗುವ ರೋಗಿಗಳು ನರಕಯಾತನೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ಏನು ಕೇಳಿದರೂ ಖಾಸಗಿ ಆಸ್ಪತ್ರೆಯತ್ತ ಕೈ ಮಾಡಿ ತೋರಿಸುವ ಸಂಪ್ರದಾಯ ಶುರುವಾಗಿತ್ತು. ಯಾವಾಗ ಸುವರ್ಣ ನ್ಯೂಸ್​​ನಲ್ಲಿ ವಿಸ್ತೃತ ವರದಿ ಪ್ರಸಾರವಾಯ್ತೋ, ಅಲ್ಲಿ ಪರಿಸ್ಥಿತಿನೇ ಬದಲಾಯ್ತು. ಇದು ಸುವರ್ಣ ನ್ಯೂಸ್​ನ ಬಿಗ್​ ಇಂಪ್ಯಾಕ್ಟ್​ ಸ್ಟೋರಿ.

ಬೀದರ್(ಅ.07): ಸದ್ಯ ಖುಷಿಯಾಗಿ ಸ್ಕ್ಯಾನಿಂಗ್​ಗಾಗಿ ಲೈನಿನಲ್ಲಿ ನಿಂತ ಗರ್ಭಿಣಿಯರು, ಬೀದರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಣ್ಣೀರು ಇಡುತ್ತಿದ್ದರು. ಸ್ಕ್ಯಾನಿಂಗ್ ಗಾಗಿ ಗರ್ಭಿಣಿಯರಿಗೆ, ರೋಗಿಗಳಿಗೆ ಇಲ್ಲಿನ ಸಿಬ್ಬಂದಿ ಪ್ರತಿದಿನ ನಾಳೆ ಬಾ ಎನ್ನುವ ಮಂತ್ರ ಶುರು ಮಾಡಿದ್ರು. ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆ ಕಡೆ ಕೈ ಮಾಡಿ ತೋರಿಸುತ್ತಿದ್ದರು. ಆದ್ರೆ ಯಾವಾಗ ಈ ಜಿಲ್ಲಾಸ್ಪತ್ರೆಯ ಕರ್ಮಕಾಂಡದ ಬಗ್ಗೆ ಸುವರ್ಣ ನ್ಯೂಸ್​ನಲ್ಲಿ ವರದಿ ಪ್ರಸಾರವಾಯ್ತೋ ಕೂಡಲೇ ಎಚ್ಚೆತ್ತುಕೊಂಡ ಬ್ರಿಮ್ಸ್​​'ನ ಅಧಿಕಾರಿಗಳು ಸ್ಕ್ಯಾನಿಂಗ್ ವಿಭಾಗವನ್ನ ಇದೀಗ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಿದ್ದಾರೆ.

ಇದು ಇಂದು ನಿನ್ನೆಯದು ಸಮಸ್ಯೆಯಲ್ಲ. ಸತತವಾಗಿ ಕಳೆದ 15 ದಿನಗಳಿಂದ ಗರ್ಭಿಣಿಯರು, ರೋಗಿಗಳು ಪರದಾಡುತ್ತಿದ್ದರು. ಯಾವಾಗ ಸುವರ್ಣನ್ಯೂಸ್'​ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೂಡಲೇ ಎಲ್ಲಾ ಆರಂಭವಾಗಿದೆ. ಹಳೆ ಆಸ್ಪತ್ರೆಯಲ್ಲಿದ್ದ ಸ್ಕ್ಯಾನಿಂಗ್​ ಡಿಪಾರ್ಟ್​ಮೆಂಟ್​ ಹೊಸ ಬ್ರಿಮ್ಸ್​ ಬಿಲ್ಡಿಂಗ್​ನಲ್ಲಿ ಪ್ರಾರಂಭಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಸುವರ್ಣ ನ್ಯೂಸ್​ನಿಂದ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಬಂದ್​ ಆಗಿರುವ ಸ್ಕ್ಯಾನಿಂಗ್​ ಡಿಪಾರ್ಟ್​ಮೆಂಟ್​ ಮತ್ತೆ ಪ್ರಾರಂಭವಾಗಿದೆ. ಹೀಗೆ ಆಸ್ಪತ್ರೆಯ ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗಲಿ ಎನ್ನುವುದೇ ನಮ್ಮ ಆಶಯ.