ಪ್ರಥಮ್'ನನ್ನು ಪ್ರಚಾರ ಮಾಡೋಕೆ ನನಗಿಷ್ಟವಿಲ್ಲ
ನವದೆಹಲಿ(ಆ.11): ಭುವನ್'ಗೆ ಕಚ್ಚಿದ ರಹಸ್ಯವನ್ನು ಬಿಗ್'ಬಾಸ್ ವಿನ್ನರ್ ಪ್ರಥಮ್ ಬಹಿರಂಗಪಡಿಸಿದ್ದಾರೆ. ‘ಭುವನ್ ನನಗೆ ಗೋಮಾಂಸ ತಿನ್ನಲು ಹೇಳಿದ. ‘ನಾನು ದಪ್ಪ ಆಗಬೇಕು ಅಂದ್ರೆ ಗೋಮಾಂಸ ತಿನ್ನಬೇಕಂತೆ. ‘ಗೋಮಾಂಸ ತಿನ್ನು ಎಂದಾಗ ಸಿಟ್ಟು ತಡೆಯಲು ಆಗಲಿಲ್ಲ. ‘ನಮ್ಮಿಬ್ಬರ ನಡುವಣ ಜಗಳಕ್ಕೆ ಅದೇ ಮುಖ್ಯ ಕಾರಣ’. ‘ನಾನು ಭುವನ್ ಜೊತೆ ಜಗಳವಾಡಿದೆ, ಕಚ್ಚಲಿಲ್ಲ’. ‘ಕಚ್ಚಲು ಹೋದಾಗ ಭುವನ್ ಸುಮ್ಮನೆ ಏಕೆ ಇದ್ದ’.‘ನನ್ನ ವಿರುದ್ಧ ಭುವನ್ ಸುಳ್ಳು ಆರೋಪ ಮಾಡಿದ್ದಾನೆ' ಎಂದು ಪ್ರಥಮ್ ನವದೆಹಲಿಯಲ್ಲಿ ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.
ಪ್ರಥಮ್'ನನ್ನು ಪ್ರಚಾರ ಮಾಡೋಕೆ ನನಗಿಷ್ಟವಿಲ್ಲ
ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ನಟ ಭುವನ್ 'ಪ್ರಥಮ್ನನ್ನ ಇನ್ನಷ್ಟು ಪ್ರಚಾರ ಮಾಡೋಕೆ ನಾನು ಬಯಸುವುದಿಲ್ಲ. ನನಗೆ ಕಚ್ಚಿರುವುದರ ಬಗ್ಗೆ ನೀಡಿದ್ದೇನೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನನ್ನಲ್ಲಿ ಎಲ್ಲಾ ಸಾಕ್ಷಿ ದಾಖಲೆಗಳಿವೆ. ನ್ಯಾಯದ ಮುಂದೆ ನಾನು ತಲೆ ಬಾಗುತ್ತೇನೆ. ಪ್ರಥಮ್ ಹೊಸ ಪ್ರಚಾರದ ತಂತ್ರಕ್ಕಾಗಿ ಹೊಸ ನಾಟಕ ಮಾಡುತ್ತಿದ್ದಾರೆ. ಪ್ರಥಮ್ ಈಗ ಕೆಟ್ಟ ಹೆಸರಿಗೆ ಸುದ್ದಿಯಾಗಿದ್ದಾರೆ. ಈ ಮೂಲಕ ಮತ್ತೆ ಒಳ್ಳೆಯನಾಗುವ ನಾಟಕ ಮಾಡುತ್ತಿದ್ದಾರೆ. ಒಳ್ಳೆಯವನಾಗಿ ಗುರುತಿಸಿಕೊಳ್ಳುವುದಕ್ಕೆ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಪ್ರಥಮ್ ಪ್ರಚಾರಕ್ಕೆ ಇನ್ನಿಲ್ಲದ ಕೆಲಸ ಮಾಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
