ವಾರಣಾಸಿ(ಡಿ. 10)  ನಾನೊಬ್ಬ ಮುಸ್ಲಿಂ ಆದ ಕಾರಣಕ್ಕೆ ಸಂಸ್ಕೃತ ಕಲಿಸಬಾರದೆ ಎಂದು ಪ್ರಶ್ನೆ ಮಾಡಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫಿರೋಜ್ ಖಾನ್ ರಾಜೀನಾಮೆ ನೀಡಿದ್ದಾರೆ. ಕಲಾ ವಿಭಾಗಕ್ಕೆ ಖಾನ್ ಶಿಫ್ಟ್ ಆಗಿದ್ದಾರೆ.

ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ್​ ಕಾಲೇಜಿನ ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ​ ಪ್ರೊಫೆಸರ್ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಬೆಂಬಲ ನೀಡಿತ್ತು.

ಮುಸ್ಲಿಂ ಪ್ರಾಧ್ಯಾಪಕನ ಸಂಸ್ಕೃತ ಇತಿಹಾಸ ಕೇಳಿ ತಿಳಿದುಕೊಳ್ಳಿ

ಡಾ. ಫಿರೋಜ್​ ಖಾನ್​ ಅವರನ್ನು ಸಂಸ್ಕೃತ ವಿಭಾಗಕ್ಕೆ ಅಸಿಸ್ಟೆಂಟ್​ ಪ್ರೊಫೆಸರ್​ ಆಗಿ ನವಂಬರ್​ 5ರಂದು ನೇಮಕ ಮಾಡಲಾಗಿತ್ತು.  ಆದರೆ ಸಂಸ್ಕೃತ ವನ್ನು ಹಿಂದೂ ಪ್ರೊಫೆಸರ್ ಮಾತ್ರ ಹೇಳಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಆಡಳಿತ ಮಂಡಳಿ ಖಾನ್ ಪರವಾಗಿ ನಿಂತುಕೊಂಡಿದ್ದರೂ ಪಾಠ-ಪ್ರವಚನಕ್ಕೆ ಬ್ರೇಕ್ ಬಿದ್ದಿತ್ತು.ಪ್ರತಿಕ್ರಿಯೆ ನೀಡಿದ್ದ ಯುನಿವರ್ಸಿಟಿಯ ವಕ್ತಾರ ರಾಜೇಶ್ ಸಿಂಗ್, ಯಾರೂ ಏನೇ ಹೇಳಲಿ, ಈ ಪೋಸ್ಟ್ ಗೆ ಖಾನ್ ಗಿಂತ ಅತ್ಯುತ್ತಮ ವ್ಯಕ್ತಿ ಸಿಗಲು ಸಾಧ್ಯವೇ ಇಲ್ಲ. ತರಬೇತಿ ಅಥವಾ ಶಿಕ್ಷಣ ನೀಡುವಲ್ಲಿ ಜಾತಿ-ಮತ-ಲಿಂಗಗಳ ತಾರತಮ್ಯ ಇಲ್ಲ. ನಾವು ಕಾನೂನು ಸಲಹೆ ಪಡೆದುಕೊಂಡು ಮುಂದೆ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಎಬಿವಿಪಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಕಾರಣಕ್ಕೆ ಖಾನ್ ರಾಜೀನಾಮೆ ನೀಡಿದ್ದಾರೆ.