ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ನಾಗ್ಪುರದಲ್ಲಿ ಅಂಬೇಡ್ಕರ್ ಗೆ ಗೌರವ ನಮನ ಸಲ್ಲಿಸಿ, ‘ಭಿಮ್’ ಆ್ಯಪ್ ನ ಕ್ರೆಡಿಟ್ಟನ್ನು ಅವರಿಗೆ ಅರ್ಪಿಸಿ, ಅಂಬೇಡ್ಕರ್ ಕನಸನ್ನು ನನಸು ಮಾಡುವುದಾಗಿ ಹೇಳಿದರು.
ನವದೆಹಲಿ (ಏ.14): ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ನಾಗ್ಪುರದಲ್ಲಿ ಅಂಬೇಡ್ಕರ್ ಗೆ ಗೌರವ ನಮನ ಸಲ್ಲಿಸಿ, ‘ಭಿಮ್’ ಆ್ಯಪ್ ನ ಕ್ರೆಡಿಟ್ಟನ್ನು ಅವರಿಗೆ ಅರ್ಪಿಸಿ ಅಂಬೇಡ್ಕರ್ ಕನಸನ್ನು ನನಸು ಮಾಡುವುದಾಗಿ ಹೇಳಿದರು.
ನಾಗ್ಪುರದಲ್ಲಿ ಜರುಗಿದ ಡಿಜಿ ಧನ್ ಮೇಳದಲ್ಲಿ ಮೋದಿ ಭಾಷಣ ಮಾಡುತ್ತಾ, ಬಡವರು ‘ಡಿಜಿ ಧನ್’ ಅನ್ನು ‘ನಿಜಿ ಧನ್’ ಎಂದು ಹೇಳುವ ದಿನ ಹೆಚ್ಚು ದೂರವಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸ್ವತಂತ್ರ ಸಂಗ್ರಾಮ ವೇಳೆ ಜನರ ತ್ಯಾಗವನ್ನು ಸ್ಮರಿಸುತ್ತಾ, ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲವಾಗಿ ಭಾರತಕ್ಕೆ ಸ್ವತಂತ್ರ ಸಿಕ್ಕಿದೆ ಎಂದಿದ್ದಾರೆ.
ಭಿಮ್ ಆ್ಯಪ್ ಬಗ್ಗೆ ಒತ್ತು ನೀಡುತ್ತಾ, ದೇಶದಾದ್ಯಂತ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಡಿಜಿಧನ್ ಚಳುವಳಿಯನ್ನು ಸಫಾಯಿ ಅಭಿಯಾನ್ ಎಂದಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಇದರ ಗುರಿ ಎಂದಿದ್ದಾರೆ.
ಬಳಿಕ ನಾಗ್ಪುರದಲ್ಲಿರುವ ಕೊರಡಿ ಥರ್ಮಲ್ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಿ, ನವೀಕರಿಸಬಹುದಾದ ಇಂಧನ ವಲಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
