ಆಕೆಯ ಮನೆಯಲ್ಲಿಯೇ ನಡೆದ ಶುಭ ಸಮಾರಂಭದಲ್ಲಿ ಆಪ್ತ ಬಾಂಧವರನ್ನು ಮಾತ್ರ ಆಹ್ವಾನಿಸಲಾಗಿತ್ತು.

ತಿರುವನಂತಪುರಂ(ಮಾ.09): ಬಹುಭಾಷಾ ನಟಿ ಭಾವನ ಅವರು ಕನ್ನಡ ಸಿನಿಮಾ ನಿರ್ಮಾಪಕರ ಜೊತೆ ನಿಶ್ಚಿತಾರ್ಥವಾಗಿದೆ. ನಿರ್ಮಾಪಕ ನವೀನ್ ಜೊತೆ ನಟಿ ಭಾವನ ಅವರು ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು,ಆಗಸ್ಟ್ ಅಥವಾ ಸೆಪ್ಟಂಬರ್'ನಲ್ಲಿ ವಿವಾಹ ನೆರವೇರುವ ಸಾಧ್ಯತೆ ಇದೆ. ಆಕೆಯ ಮನೆಯಲ್ಲಿಯೇ ನಡೆದ ಶುಭ ಸಮಾರಂಭದಲ್ಲಿ ಆಪ್ತ ಬಾಂಧವರನ್ನು ಮಾತ್ರ ಆಹ್ವಾನಿಸಲಾಗಿತ್ತು. ನಿರ್ಮಾಪಕ ನವೀನ್ 2012ರಲ್ಲಿ ಗಣೇಶ್ ಹಾಗೂ ಭಾವನಾ ಅಭಿನಯದ ರೋಮಿಯೊ ಚಿತ್ರ ನಿರ್ಮಿಸಿದ್ದರು. 'ನಾಯಕ' ಸಿನಿಮಾಗೂ ಅವರೇ ನಿರ್ಮಾಪಕರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

30 ವರ್ಷದ ನಟಿ ಭಾವನಾ ಅನೇಕ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವರದಿಗಳ ಪ್ರಕಾರ ಭಾವನ ಮದುವೆಯ ನಂತರವೂ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಮಲಯಾಳಂ ಚಿತ್ರ ಚಾರ್ಲಿ ಕನ್ನಡಕ್ಕೆ ರಿಮೇಕ್ ಆಗಲಿದ್ದು ಆ ಚಿತ್ರದಲ್ಲಿ ಭಾವನಾ ಅಭಿನಯಿಸಲಿದ್ದಾರೆ.