ಭಾವನ ಬೆಳೆಗೆರೆ ಅವರು ಕಾರು ಚಲಾಯಿಸುತ್ತಿರುವಾಗ ಉತ್ತರಹಳ್ಳಿ ಬಳಿ ಎದುರು ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಬೆಂಗಳೂರು[ಆ.06]: ಪತ್ರಕರ್ತ ರವಿ ಬೆಳಗೆರೆ ಪುತ್ರಿ ಭಾವನ ಬೆಳಗೆರೆ ಅಡ್ಡಾದಿಡ್ಡಿ ಕಾರು ಚಲಿಸಿ ಅಪಘಾತವುಂಟು ಮಾಡಿದ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭಾವನ ಬೆಳೆಗೆರೆ ಅವರು ಕಾರು ಚಲಾಯಿಸುತ್ತಿರುವಾಗ ಉತ್ತರಹಳ್ಳಿ ಬಳಿ ಎದುರು ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನೊಂದಿಗೆ ರಿಪೇರಿ ವೆಚ್ಚವನ್ನು ನೀಡುವುದಾಗಿ ರಾಜಿ ಒಪ್ಪಂದ ಮಾಡಿಕೊಂಡ ನಂತರ ಪ್ರಕರಣ ಸ್ಥಳದಲ್ಲೇ ಇತ್ಯರ್ಥವಾಗಿದ್ದು ದೂರು ದಾಖಲಾಗಿಲ್ಲ.