Asianet Suvarna News Asianet Suvarna News

ಪತ್ನಿಯ ಪರಸಂಗ ಪ್ರಶ್ನಿಸಿದ್ದಕ್ಕೆ ಭಾಸ್ಕರ್ ಶೆಟ್ಟಿ ಕೊಲೆಯಾಯ್ತಾ..?

ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.  ಚಾರ್ಜ್` ಶೀಟ್`ನಲ್ಲಿರುವ ಕೆಲವೊಂದು ಮಹತ್ವದ ಅಂಶಗಳು ಸುವರ್ಣ ನ್ಯೂಸ್`ಗೆ ಲಭ್ಯವಾಗಿದೆ. ಈ ಕೊಲೆ ನಡೆದಿರುವ ರೀತಿ ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸುವಂತಿದೆ. ಸಂಪತ್ತು ಮತ್ತು ದೈಹಿಕ ಸುಖ ಮನುಷ್ಯನಿಂದ ಏನೆಲ್ಲಾ ಮಾಡಿಸುತ್ತೆ ಎನ್ನುವುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ

bhaskar shetty murder case chargesheet submitts

ಉಡುಪಿ(ನ.03): ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.  ಚಾರ್ಜ್` ಶೀಟ್`ನಲ್ಲಿರುವ ಕೆಲವೊಂದು ಮಹತ್ವದ ಅಂಶಗಳು ಸುವರ್ಣ ನ್ಯೂಸ್`ಗೆ ಲಭ್ಯವಾಗಿದೆ. ಈ ಕೊಲೆ ನಡೆದಿರುವ ರೀತಿ ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸುವಂತಿದೆ. ಸಂಪತ್ತು ಮತ್ತು ದೈಹಿಕ ಸುಖ ಮನುಷ್ಯನಿಂದ ಏನೆಲ್ಲಾ ಮಾಡಿಸುತ್ತೆ ಎನ್ನುವುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ.

ಭಾಸ್ಕರ್ ಶೆಟ್ಟಿ ಹಣ ನಿರಂಜನ್ ಪಾಲು: ರಾಜೇಶ್ವರಿಗೆ ಪತಿ ಭಾಸ್ಕರ್ ಶೆಟ್ಟಿ ದುಬೈನಿಂದ ಕಳುಹಿಸುತ್ತಿದ್ದ ಹಣ ನಿರಂಜನ ಭಟ್ಟನ ಪಾಲಾಗುತ್ತಿತ್ತು ಇದರಿಂದ ಭಾಸ್ಕರ ಶೆಟ್ಟಿಗೆ ಮೊದಲ ಸಂಶಯ ಬಂದಿತ್ತು. ಭಾಸ್ಕರ ಶೆಟ್ಟಿ ಪತ್ನಿಯ ಮೊಬೈಲ್ ಕಸಿದುಕೊಂಡಾಗ ಅಲ್ಲಿ ಆತನಿಗೆ ಮರ್ಮಾಘಾತವಾಗಿತ್ತು. ರಾಜೇಶ್ವರಿಯ ಮೊಬೈಲ್`ನಲ್ಲಿ ನಿರಂಜನ ಭಟ್ಟನಿಗೆ ಕಳುಹಿಸಿದ್ದ ಆಕೆಯ ಗುಪ್ತಾಂಗಗಳ ಫೋಟೋ ಮತ್ತು ನಿರಂಜನ ಭಟ್ಟನ ಜೊತೆಗೆ ತೆಗೆಸಿಕೊಂಡಿದ್ದ ಅಶ್ಲೀಲ ಫೋಟೋಗಳು ಸಿಕ್ಕಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ತಾಯಿ ಮಗ ಸೇರಿ ಹಲ್ಲೆ ನಡೆಸಿದ್ದರು. ತಂದೆ ಮಾತನಾಡುವ ವಿಷಯಗಳ ನವನೀತ ಮೊಬೈಲ್ ಫೋನ್ ಅಡಗಿಸಿಟ್ಟು ರೆಕಾರ್ಡ್ ಮಾಡಿಕೊಂಡಿದ್ದ.

ನಿರಂಜನ ಭಟ್ಟನ ಜೊತೆ ದೈಹಿಕ ಸುಖ ಪಡೆಯುತ್ತಿದ್ದ ರಾಜೇಶ್ವರಿ ಆತನಿಗೆ ಚಂಪಾ ರೆಸಿಡೆನ್ಸಿಯಲ್ಲಿ 17 ಲಕ್ಷದ ಫ್ಲಾಟು, ಕಾರು ನೀಡಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಪೂಜಾರಿ, ಸುರೇಂದ್ರ ನಾಯಕ್ ಮತ್ತು ರೂಪರಾಜ್ ತನಿಖೆಯ ವೇಳೆ ಮೂರು ಮಹತ್ವದ ಸಾಕ್ಷಿಗಳು ಲಭ್ಯವಾಗಿದೆ ಎಂದು ಚಾರ್ಜ್ ಶೀ`ನಲ್ಲಿ ಉಲ್ಲೇಖಿಸಲಾಗಿದೆ. ಸತೀಶ್ ಪೂಜಾರಿ ಮುಂಬೈನಲ್ಲಿದ್ದು ಈ ಕೃತ್ಯ ತಾನೇ ಮಾಡಿದ್ದು ಎಂದು ಒಪ್ಪಿಕೊಂಡರೆ ಮನೆ, ಕಾರು ಕೊಡಿಸೋದಾಗಿ ನಿರಂಜನ ಭಟ್ಟ ಆಮಿಷವೊಡ್ಡಿದ್ದ ಎಂದೂ ಸಹ ಚಾರ್ಜ್ ಶೀಟ್`ನಲ್ಲು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

-ಚಾರ್ಟೆಡ್ ಅಕೌಂಟೆಂಟ್ ಸುರೇಂದ್ರ ನಾಯಕ್ ಅವರ ಬಳಿಯಿಂದ ಆಸ್ತಿ ಪರಭಾರೆಗೆ ಭಾಸ್ಕರ ಶೆಟ್ಟಿ ಸ್ಟಾಂಪ್ ಪೇಪರ್ ಖರೀಧಿಸಿದ್ದರು.

- ರೂಪರಾಜ್ ಮರದ ಕೆಲಸ ಮಾಡುತ್ತಿದ್ದು, ಅವನಲ್ಲಿ ತಾನು ವೀಲ್ ಬರೆಯುವ ಬಗ್ಗೆ ಭಾಸ್ಕರ ಶೆಟ್ಟಿ ಹೇಳಿಕೊಂಡಿದ್ದರು.

- ಈಮೂವರ ಹೇಳಿಕೆ ಕೋರ್ಟ್ ನಲ್ಲಿ ದಾಖಲಾಗಿದೆ.

- ಕೃತ್ಯಕ್ಕೆ ಎಲ್ಲಾ ಬಗೆಯ ಸಂಚು ನಡೆಸಿದ್ದು ಕೃಷ್ಣಮಠ ಸಮೀಪದ ರಾಜಾಂಗಣದ ಪಾರ್ಕಿಂಗ್ ಏರಿಯಾದಲ್ಲಿ

- ಕೊಲೆ ನಡೆದ ದಿನ ಸಂಜೆ 3.45 ರಿಂದ ಬಗೆಬಗೆಯ ಹಲ್ಲೆ, ವಿಷಕುಡಿಸುವುದು, ಕೀಟ ನಾಶಕ ಕುಡಿಸುವುದು, ಬಾತ್ ಟಬ್ ನಲ್ಲಿ ಮುಳುಗಿಸುವುದು ನಡೆದಿದ್ದರೂ ಭಾಸ್ಕರ ಶೆಟ್ಟಿ ನಿರಂಜನ ಭಟ್ಟನ ಕಾರಿನ ಡಿಕ್ಕಿಯಲ್ಲಿ ಸುಮಾರು 6.45 ಕ್ಕೆ ಕೊನೆಯುಸಿರೆಳೆದಿದ್ದರು. ಸುಡುವ ಮುನ್ನ ಭಾಸ್ಕರ ಶೆಟ್ಟಿ ಸತ್ತಿದ್ದರು.