ಬೆಂಗಳೂರು :  ಒಂದೆಡೆ ನಟ ವಿಷ್ಣುವರ್ಧನ್ ಅಭಿಮಾನಿ ಗಳು ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಒತ್ತಾಯಿಸುತ್ತಿದ್ದರೆ, ಇನ್ನೊದೆಡೆ ಅವರ ಅಳಿಯ, ನಟ ಅನಿರುದ್ಧ ಅವರು, ‘ಮೈಸೂರಿನಲ್ಲಿಯೇ ಡಾ. ವಿಷ್ಣು ಸ್ಮಾರಕ ನಿರ್ಮಾಣ ಆಗಲಿದೆ, ಅದರಲ್ಲಿ ಎರಡು ಮಾತಿಲ್ಲ. ಸ್ಮಾರಕ ನಿ ರ್ಮಾಣ ಕಾಮ ಗಾರಿ ಆರಂಭಿಸುವ ಪ್ರಯತ್ನವನ್ನು ಜನವರಿಯಲ್ಲೇ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ. 

ಇನ್ನು ಬಗ್ಗೆ  ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಪದೇ ಪದೇ ಒತ್ತಾಯ ಮಾಡುತ್ತಿದ್ದೇನೆ ಅನ್ನುತ್ತಾರೆ, ಅದರ ಅಗತ್ಯತೆಯೂ ಇತ್ತು. ಒಂಬತ್ತು ವರ್ಷವಾದರೂ ಒಬ್ಬ ಹಿರಿಯ ನಟನ ಸ್ಮಾರಕವಾಗಿಲ್ಲ ಎಂದರೆ ಬೇಸರವಾಗುತ್ತದೆ. ಈಗಲಾದರೂ ಕಾಮಗಾರಿ ಕೈಗೆತ್ತಿಕೊಳ್ಳಲಿ. 

ಇನ್ನುಮುಂದೆ ಕಾಮಗಾರಿ ಅಥವಾ ಸ್ಮಾರಕ ನಿರ್ಮಾಣದ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೇನೆ. ಏಕೆಂದರೆ ಹಲವು ಬಾರಿ ಹಲವು ಸರ್ಕಾರಗಳಿಗೆ ಮನವಿ ಮಾಡಿ ಸಾಕಾಗಿದೆ ಎಂದು ಭಾರತಿ ವಿಷ್ಣುವರ್ಧನ್ ಅವರು ಬೇಸರ ವ್ಯಕ್ತಪಡಿಸಿದರು.