ಕೋಲ್ಕತಾ[ಫೆ.12]: ಪ್ರಖ್ಯಾತ ಸಂಗೀತ ನಿರ್ದೇಶಕ, ಗಾಯಕ ಭೂಪೇನ್‌ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದ ಭಾರತ ರತ್ನ ಪ್ರಶಸ್ತಿಯನ್ನು ತಿರಸ್ಕರಿಸುವ ಬಗ್ಗೆ ಕುಟುಂಬ ಸದಸ್ಯರು ಚಿಂತನೆ ನಡೆಸಿದ್ದಾರೆ. ಆದರೆ ಈ ಚಿಂತನೆ ಬಗ್ಗೆಯೇ ಅವರ ಕುಟುಂಬದಲ್ಲಿ ಅಪಸ್ವರ ಕೂಡಾ ಕೇಳಿಬಂದಿದೆ.

ಕೇಂದ್ರ ಸರ್ಕಾರ, ಅಸ್ಸಾಂನಲ್ಲಿ ವಿವಾದಿತ ಪೌರತ್ವ ಕಾಯ್ದೆ ಜಾರಿಗೆ ಮುಂದಾಗಿರುವುದರ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಭೂಪೇನ್‌ ಅವರ ಪುತ್ರ ತೇಜ್‌ ಹಜಾರಿಕಾ ತೀವ್ರ ವಿರೋಧ ಹೊಂದಿದ್ದಾರೆ. ಹೀಗಾಗಿ ಪ್ರಶಸ್ತಿಯನ್ನು ತಿರಸ್ಕರಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಅವರ ಈ ಪ್ರಸ್ತಾಪಕ್ಕೆ ಭೂಪೇನ್‌ ಅವರ ಸೋದರ ಸಮರ್‌ ಅಪಸ್ವರ ಎತ್ತಿದ್ದಾರೆ. ಭಾರತ ರತ್ನ ಗೌರವ ತಿರಸ್ಕರಿಸುವ ವಿಷಯವನ್ನು ಒಬ್ಬ ವ್ಯಕ್ತಿ ನಿರ್ಧರಿಸಲಾಗದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಸಾಮಾಜಿಕ ಕಾರ್ಯಕರ್ತ ದಿ. ನಾನಾಜಿ ದೇಶ್‌ಮುಖ್‌, ದಿ. ಭೂಪೇನ್‌ ಹಜಾರಿಕಾ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಗೆ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿತ್ತು.