Asianet Suvarna News Asianet Suvarna News

ಹುತಾತ್ಮ ಯೋಧರ ಕುಟುಂಬಕ್ಕೆ ಹಣಕಾಸು ನೆರವು ನೀಡಬಯಸುವವರಿಗೆ ಸಿಹಿಸುದ್ದಿ

ಸಿಆರ್’ಪಿಎಫ್ ಹಾಗೂ ಅರೆ-ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಈ ವೆಬ್’ಸೈಟ್ ಮೂಲಕ ಹಣಕಾಸು ನೆರವನ್ನು ಒದಗಿಸಬಹುದು. ಈ ಪರಿಹಾರ ನಿಧಿಗೆ ಹಣವನ್ನು ದಾನ ಮಾಡುವ ದಾನಿಗಳಿಗೆ, ತಾವು ಬಯಸುವ ಹುತಾತ್ಮ ಯೋಧರನ್ನು ಆಯ್ಕೆ ಮಾಡಬಹುದಾಗಿದೆ.

Bharat Ke Veer To Be Released Tomorrow

ದೇಶಕ್ಕಾಗಿ ಪ್ರಾಣತೆತ್ತ ಯೋಧರ ಕುಟುಂಬಕ್ಕೆ ಸಹಾಯಹಸ್ತ ಒದಗಿಸಲು ಬಯಸುವವರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರವು ‘ಭಾರತ್ ಕೇ ವೀರ್’ ಎಂಬ ವೆಬ್’ಸೈಟನ್ನು ನಿರ್ಮಿಸಿದೆ. ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ನಾಳೆ ಆ ವೆಬ್’ಸೈಟ್’ಗೆ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ‘ಭಾರತ್ ಕೇ ವೀರ್’ ಮೊಬೈಲ್ ಅಯಪ್ ಕೂಡಾ ಬಿಡುಗಡೆಯಾಗಲಿದೆ.

ಸಿಆರ್’ಪಿಎಫ್ ಹಾಗೂ ಅರೆ-ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಈ ವೆಬ್’ಸೈಟ್ ಮೂಲಕ ಹಣಕಾಸು ನೆರವನ್ನು ಒದಗಿಸಬಹುದು. ಈ ಪರಿಹಾರ ನಿಧಿಗೆ ಹಣವನ್ನು ದಾನ ಮಾಡುವ ದಾನಿಗಳಿಗೆ, ತಾವು ಬಯಸುವ ಹುತಾತ್ಮ ಯೋಧರನ್ನು ಆಯ್ಕೆ ಮಾಡಬಹುದಾಗಿದೆ.

ಎಲ್ಲ ಹುತಾತ್ಮ ಯೋಧರ ಕುಟುಂಬಗಳಿಗೆ ಇದರ ಪ್ರಯೋಜನ ಸಿಗುವಂತಾಗಲು, ರೂ.15 ಲಕ್ಷ ಮಿತಿಯನ್ನು ಇಡಲಾಗಿದೆ. ಒಮ್ಮೆ ಆ ಮಿತಿ ತಲುಪಿದಾಗ ದಾನಿಗಳಿಗೆ ಆ ಬಗ್ಗೆ ಅಲರ್ಟ್ ಕೂಡಾ ಮಾಡುವಂತಹ ವ್ಯವಸ್ಥೆ ಈ ವೆಬ್’ಸೈಟ್’ನಲ್ಲಿದೆ. ಆಗ ದಾನಿಗಳು ಉಳಿದ ಹಣವನ್ನು ಇತರ ಹುತಾತ್ಮ ಯೋಧರ ಖಾತೆಗೆ ಜಮಾಯಿಸಬಹುದಾಗಿದೆ. ನ್ಯಾಷನಲ್ ಇಂಫಾರ್ಮೆಟಿಕ್ಸ್ ಸೆಂಟರ್, ಭಾರತೀಯ ಸ್ಟೇಟ್ ಬ್ಯಾಂಕಿನ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದೆ.  

(ಸಾಂದರ್ಭಿಕ ಚಿತ್ರ)

Latest Videos
Follow Us:
Download App:
  • android
  • ios