ಉದ್ಯಮಿ ಮುಕೇಶ್ ಅಂಬಾನಿ - ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರ ನಿಶ್ಚಿತಾರ್ಥ ಆನಂದ್ ಪಿರಮಾಳ್ ಅವರೊಂದಿಗೆ ನಡೆದಿದ್ದು ಶೀಘ್ರ ಇಬ್ಬರೂ ಕೂಡ ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್ ನಲ್ಲಿ ನಡೆಯುವ ಈ ವಿವಾಹದಲ್ಲಿ ಭರ್ಜರಿ ವಿಶೇಷತೆಗಳೇ ಇರಲಿದೆ.
ಮುಂಬೈ : ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ - ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರ ನಿಶ್ಚಿತಾರ್ಥ ಆನಂದ್ ಪಿರಮಾಳ್ ಅವರೊಂದಿಗೆ ನಡೆದಿದ್ದು ಶೀಘ್ರ ಇಬ್ಬರೂ ಕೂಡ ಸಪ್ತಪದಿ ತುಳಿಯಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಕೂಡ ಇಟಲಿಯಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿಸಲಾಗಿತ್ತು. ಇದೀಗ ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಡಿಸೆಂಬರ್ 10 ರಂದು ಆನಂದ್ ಹಾಗೂ ಇಶಾ ವಿವಾಹ ನಡೆಯಲಿದ್ದು 8 - 9 ರಂದು ವಿವಾಹ ಪೂರ್ವ ಕಾರ್ಯಕ್ರಮಗಳಾದ ಸಂಗೀತ್ ಅಮೆರಿಕದ ಪ್ರಸಿದ್ಧ ಅಂತಾರಾಷ್ಟ್ರೀಯ ಸಂಗೀತಗಾರ್ತಿ ಬಿಯೋನ್ಸ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಒಂದು ಕಾರ್ಯಕ್ರಮಕ್ಕೆ 15 ಕೋಟಿ ಪಡೆಯುವ ಈಕೆಯಿಂದ ಅಂಬಾನಿ ಕುಟುಂಬದ ರಾಯಲ್ ವೆಡ್ಡಿಂಗ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
