ಇಂಟರ್​ನೆಟ್​ ಉಪಯೋಗಿಸಬೇಕು ಅಂತ ಕಾಲೇಜ್​​ ವಿದ್ಯಾರ್ಥಿಯ ಮೊಬೈಲ್ ಪಡೆದು, ಆ ನಂಬರ್​ನಿಂದ ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ.

ಬೆಂಗಳೂರು (ಜ.27): ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಪೋಲಿ ಸೆಕ್ಯೂರಿಟಿ ಗಾರ್ಡ್​’ನನ್ನು ಪೊಲೀಸರು ಬಂಧಿಸಿದ್ದಾರೆ. 

ದೂರಿನ ಮೇರೆಗೆ ವಿಚಾರಣೆ ನಡೆಸಿದ ಮಲ್ಲೇಶ್ವರಂ ಪೊಲೀಸರು, ಸೆಕ್ಯೂರಿಟಿಗಾರ್ಡ್​ ಮಹೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ.

ಇಂಟರ್​ನೆಟ್​ ಉಪಯೋಗಿಸಬೇಕು ಅಂತ ಕಾಲೇಜ್​​ ವಿದ್ಯಾರ್ಥಿಯ ಮೊಬೈಲ್ ಪಡೆದು, ಆ ನಂಬರ್​ನಿಂದ ಉಪನ್ಯಾಸಕಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ.

ಲವ್​ ಮಾಡ್ತೀರಾ? ಫ್ರಿ ಇದ್ದರೆ ಸಿಗ್ತಿರಾ? ಅಂತಾ ಮೆಸೇಜ್ ಕಳುಹಿಸಿದ್ದಾನೆ. ಈ ಬಗ್ಗೆ ಜನವರಿ 13ರಂದು ಉಪನ್ಯಾಸಕಿಯರು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಸೆಕ್ಯೂರಿಟಿಗಾರ್ಡ್ ಕೃತ್ಯ ಬಯಲಾಗಿದೆ.