ಸಿಲಿಕಾನ್ ಸಿಟಿಯಲ್ಲಿದೆ ಖತರ್ನಾಕ್ ಯುವತಿಯರ ಗ್ಯಾಂಗ್ : ಹುಷಾರ್..!

First Published 25, Jun 2018, 11:45 AM IST
Beware : Gangs Of Female Robbers in Bengaluru
Highlights

ಬೆಂಗಳೂರಿನಲ್ಲಿ ಯುವತಿಯರ ಗ್ಯಾಂಗ್ ಒಂದು ಯುವಕನೋರ್ನನಿಗೆ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.  ವಿಳಾಸ ಕೇಳುವ ನೆಪದಲ್ಲಿ ಬಂದು ಸುಲಿಗೆ ಮಾಡಿದೆ. 
 

ಬೆಂಗಳೂರು:  ಬೆಂಗಳೂರಿನಲ್ಲಿ ಯುವತಿಯರ ಗ್ಯಾಂಗ್ ಒಂದು ಯುವಕನೋರ್ನನಿಗೆ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.  ವಿಳಾಸ ಕೇಳುವ ನೆಪದಲ್ಲಿ ಬಂದು ಸುಲಿಗೆ ಮಾಡಿದೆ. 

ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮುಗಿಸಿ ಬರುವಾಗ ಗೌರವ್ ನೇಗಿ ಎಂಬಾತನನ್ನ  ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿದೆ.  ಸ್ವಪ್ನ ಬುಕ್ ಸ್ಟಾಲ್ ಅಡ್ರೆಸ್ ಕೇಳುತ್ತ ಆಡ್ಡ ಬಂದ ಯುವತಿಯರು, ನಂತರ ಕರ್ಚೀಫು ಮುಖಕ್ಕೆ ಒತ್ತಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರ, ಪರ್ಸ್ ಎಗರಿಸಿ ಎಸ್ಕೇಪ್ ಆಗಿದ್ದಾರೆ.  ರೆಸಿಡೆನ್ಸಿ ರಸ್ತೆಯಲ್ಲಿ ಘಟನೆ ನಡೆದಿದಿದೆ.

ಈ ಸಂಬಂಧ ಇದೀಗ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

loader