
ಮೈಸೂರು(ಸೆ.18): ಸಿಎಂ ತವರಲ್ಲಿ ಮರ್ಯಾದ ಹತ್ಯೆ ಬೆನ್ನತ್ತಿದ ತನಿಖಾ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿದೆ. ಮೈಸೂರು ವರದಿಗಾರ ರವಿಪಾಂಡವಪುರ ಅವರಿಗೆ ಉತ್ತಮ ವರದಿಗಾರ ಹಾಗೂ ಕ್ಯಾಮೆರಾಮೆನ್ ಪ್ರಮೋದ್ ಪ್ರಭು ಅವರಿಗೆ ಉತ್ತಮ ಕ್ಯಾಮೆರಾಮೆನ್ ಪ್ರಶಸ್ತಿ ನೀಡಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗಾಪುರ ಹಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟಿ ಭಾವನ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಬೆಜ್ವಾಡ ವಿಲ್ಸನ್, ಪರಿಸರ ಪತ್ರಕರ್ತ ನಾಗೇಶ್ ಹೆಗ್ಡೆ ಪ್ರಶಸ್ತಿ ವಿತರಿಸಿದರು. 2013-14 ನೇ ಸಾಲಿನಲ್ಲಿಯೂ ಅಮ್ಮಂದಿರ ದಿನದ ವಿಶೇಷ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿತ್ತು. ರವಿಪಾಂಡವಪುರ ಎರಡನೇ ಬಾರಿಗೆ ಉತ್ತಮ ವರದಿಗಾರ ಪ್ರಶಸ್ತಿ ಪಡೆದಿದ್ದಾರೆ.
