ತಾನು ಭಿಕ್ಷುಕನಾದರೂ ಕೂಡ ಸಲೀಸಾಗಿ ಇಂಗ್ಲಿಷ್ ಮಾತನಾಡುತ್ತಾರೆ, ಬರೆಯುತ್ತಾರೆ. ಏನಾದರೂ ಇಂಗ್ಲಿಷ್'ನಲ್ಲಿ ಗೊತ್ತಾಗುವುದಿಲ್ಲ ಎಂದರೆ ಸಹಾಯ ಕೂಡ ಮಾಡುತ್ತಾರೆ.
ಎಷ್ಟೊ ಅಧಿಕಾರಿಗಳು, ರಾಜಕಾರಣಿಗಳು ಉನ್ನತ ಹುದ್ದೆಗಳಲ್ಲಿದ್ದರೂ ಇಂಗ್ಲಿಷ್ ಓದಲು, ಬರೆಯಲು ತಡವಡಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಇರೋ ಭಿಕ್ಷುಕ ನೊಬ್ಬ ಇಂಗ್ಲಿಷ್ ಮಾತನಾಡುತ್ತಾನೆ ಎಂದರೆ ಆಶ್ಚರ್ಯವೇ ಸರಿ. ಅಚ್ಚರಿ ಪಡಬಹುದಾದ ವಿಷಯವಾದರೂ ಇದು ಸತ್ಯ.
ಇಂತಹ ಒಬ್ಬ ಆಂಗ್ಲ ಭಿಕ್ಷುಕ ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರ ಬಳಿ ಭಿಕ್ಷೆ ಬೀಡುತ್ತಾ ಜೀವನ ಸಾಗಿಸುತ್ತಿದ್ದಾರೆ. ತಾನು ಭಿಕ್ಷುಕನಾದರೂ ಕೂಡ ಸಲೀಸಾಗಿ ಇಂಗ್ಲಿಷ್ ಮಾತನಾಡುತ್ತಾರೆ, ಬರೆಯುತ್ತಾರೆ. ಏನಾದರೂ ಇಂಗ್ಲಿಷ್'ನಲ್ಲಿ ಗೊತ್ತಾಗುವುದಿಲ್ಲ ಎಂದರೆ ಸಹಾಯ ಕೂಡ ಮಾಡುತ್ತಾರೆ. ಇಂಗ್ಲಿಷ್ ಮಾತನಾಡುವ ಇವರು ಓದಿರುವುದು 9ನೇ ತರಗತಿ ಮಾತ್ರ. 80 ವರ್ಷ ವಯಸ್ಸಿನ ಇವರ ಹೆಸರು ಡ್ಯಾನಿಯಲ್. ಸೇಂಟ್ ಜೊಸೇಫ್ ಸ್ಕೂಲ್ನಲ್ಲಿ 9 ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಆದರೆ ಪ್ರತಿನಿತ್ಯ ಇಂಗ್ಲಿಷ್ ನ್ಯೂಸ್ ಪೇಪರ್ ಓದುತ್ತಾರೆ.
ಬ್ಯಾಂಕ್ಗಳ ಮುಂದೆ ಹಣಕ್ಕಾಗಿ ತಾಸುಗಟ್ಟಲೆ ನಿಲ್ಲುವ ಜನರಿಗೆ ಚಲನ್ , ಚೆಕ್ ಹಾಗೂ ಮುಂತಾದವುಗಳನ್ನ ಇಂಗ್ಲಿಷ್ನಲ್ಲೇ ಬರೆದು ಕೊಟ್ಟು ಸಹಾಯ ಮಾಡುತ್ತಾರೆ ಅಷ್ಟೇ ಅಲ್ಲದೆ ನಗರಕ್ಕೆ ಹೊಸದಾಗಿ ಬಂದವರು ಈತನನ್ನು ಮಾತನಾಡಿಸಿ ವಿಳಾಸ ಕೇಳಿದರೆ ಟಕಟಕಾ ಅಂತ ಅವರಿಗೆ ಇಂಗ್ಲಿಷ್'ನಲ್ಲೇ ವಿಳಾಸವನ್ನ ತಿಳಿಸಿಕೊಡ್ತಾರೆ. ನಂತರ ರಾತ್ರಿ ವೇಳೆಗೆ ಎಲ್ಲಾದ್ರೂ ರಸ್ತೆ ಮೇಲೆ ಮಲಗುತ್ತಾರೆ. ಇನ್ನು ಪ್ರತಿ ಭಾನುವಾರ ಚರ್ಚ್ಗೆ ಹೋಗೊದು ಮಾತ್ರ ತಪ್ಪಿಸುವುದಿಲ್ವಂತೆ.
