ಸಿಲಿಕಾನ್ ಸಿಟಿ ಮಹಿಳೆಯರೇ ಹುಶಾರ್! ನಿಮ್ಮ ಬಾತ್’ರೂಮ್ ಕೂಡಾ ಸೇಫ್ ಅಲ್ಲ!

First Published 1, Mar 2018, 11:23 AM IST
Bengaluru Women be Careful
Highlights

ಸಿಲಿಕಾನ್ ಸಿಟಿಯ ಮಹಿಳೆಯರೇ ಹುಷಾರ್!  ನಿಮ್ಮ ಮನೆಯ ಬಾತ್ ರೂಂ ಕೂಡ ನಿಮಗೇ ಸೇಫ್ ಅಲ್ಲ. ಸ್ವಲವೂ ಅನುಮಾನ ಬಾರದಂತೆ ಬಾತ್ ರೂಂನಲ್ಲಿ ಸಿಕ್ರೇಟ್ ಕ್ಯಾಮೆರಾ ಫಿಕ್ಸ್ ಮಾಡಿ ಅಶ್ಲೀಲ ದೃಶ್ಯಗಳನ್ನ ರೆಕಾರ್ಡ್ ಮಾಡ್ತಾರೆ!

ಬೆಂಗಳೂರು (ಮಾ. 01): ಸಿಲಿಕಾನ್ ಸಿಟಿಯ ಮಹಿಳೆಯರೇ ಹುಷಾರ್!  ನಿಮ್ಮ ಮನೆಯ ಬಾತ್ ರೂಂ ಕೂಡ ನಿಮಗೇ ಸೇಫ್ ಅಲ್ಲ. ಸ್ವಲವೂ ಅನುಮಾನ ಬಾರದಂತೆ ಬಾತ್ ರೂಂನಲ್ಲಿ ಸಿಕ್ರೇಟ್ ಕ್ಯಾಮೆರಾ ಫಿಕ್ಸ್ ಮಾಡಿ ಅಶ್ಲೀಲ ದೃಶ್ಯಗಳನ್ನ ರೆಕಾರ್ಡ್ ಮಾಡ್ತಾರೆ!

ಬಾತ್ ರೂಮ್’ನಲ್ಲಿ ಸಿಕ್ರೇಟ್ ಕ್ಯಾಮೆರಾ ಇಟ್ಟು ಅಶ್ಲೀಲ ದೃಶ್ಯಗಳನ್ನ ಸೆರೆಹಿಡಿಯುತ್ತಿದ್ದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 
ಮೈಕೋಲೇಔಟ್ ನ ಮನೆಯೊಂದರ ಬಾತ್ ರೂಂ ನಲ್ಲಿ ಸಿಕ್ರೇಟ್ ಕ್ಯಾಮೆರ ಇಟ್ಟು ಅಶ್ಲೀಲ ದೃಶ್ಯಗಳನ್ನ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದ  ಕಾಮುಕ ಸಿಕ್ಕಿ ಬಿದ್ದಿದ್ದಾನೆ.  ಸ್ನಾನ ಮಾಡುವ ವೇಳೆ ಸಿಕ್ರೇಟ್ ಕ್ಯಾಮೆರಾ ನೋಡಿ ಮಹಿಳೆ ಎಚ್ಚೆತ್ತುಕೊಂಡಿದ್ದಾಳೆ.  ಈ ಬಗ್ಗೆ ವಿಚಾರಿಸಿದಾಗ ಪಕ್ಕದ ಮನೆಯ ವ್ಯಕ್ತಿಯೇ ಬಾತ್ ರೂಮ್ ಕಿಟಕಿಗೆ ಕ್ಯಾಮೆರಾ ಫಿಕ್ಸ್ ಮಾಡಿರೋದು ಬೆಳಕಿಗೆ ಬಂದಿದೆ.  ಪಕ್ಕದ ಮನೆಯ ಆರೋಪಿ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ.  ಕೂಡಲೇ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ. 

loader