ಬೆಳಗ್ಗೆಯಿಂದ ಬಿಕೋ ಎನ್ನುತ್ತಿದ್ದ ರಸ್ತೆಗೆ ನಿಧಾನವಾಗಿ ಸಾರಿಗೆ ಬಸ್`ಗಳ ಸಂಚಾರ ಆರಂಭಿಸಿವೆ
ಬೆಂಗಳೂರು(ಸೆ.09): ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ಬೆಳಗ್ಗೆಯಿಂದ ಬಿಕೋ ಎನ್ನುತ್ತಿದ್ದ ರಸ್ತೆಗೆ ನಿಧಾನವಾಗಿ ಸಾರಿಗೆ ಬಸ್`ಗಳ ಸಂಚಾರ ಆರಂಭಿಸಿವೆ. ಸಂಜೆ 6 ಗಂಟೆ ಸುಮಾರಿಗೆ ಶಿವಾಜಿನಗರದಲ್ಲಿ ಗಣಪತಿ ಶೋಭಾಯಾತ್ರೆ ಆರಂಭವಾಗಿದೆ. ಆಟೋಗಳು ಸಂಚಾರ ಆರಂಭಿಸಿವೆ. ಏರ್`ಪೋರ್ಟ್`ನಿಂದ ವಾಯುವಜ್ರ ಬಸ್ ಸಂಚಾರ ಆರಂಭವಾಗಿದೆ.
